ಕಣ್ಣಿನ ಉಚಿತ ತಪಾಸಣಾ ಶಿಬಿರ

04 HANUR 1 A
Published on

ಹನೂರು: ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್ ಹಾಗೂ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.


ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನಡೆದ ಈ ಶಿಬಿರಕ್ಕೆ ಹನೂರು ಸೇರಿದಂತೆ ಮಂಗಲ, ಗುಂಡಾಪುರ, ಆರ್.ಎಸ್ ದೊಡ್ಡಿ, ಲೊಕ್ಕನಹಳ್ಳಿ, ಬೆಳತ್ತೂರು, ಉದ್ದನೂರು, ಮಣಗಳ್ಳಿ, ಬಂಡಳ್ಳಿ, ಶಾಗ್ಯ, ಅಜ್ಜೀಪುರ, ಎಲ್ಲೇಮಾಳ, ಚಿಂಚಳ್ಳಿ ಹಾಗೂ ಇನ್ನಿತರೆ ಕಡೆಗಳಿಂದ ಸುಮಾರು 161 ಜನರು ನೋಂದಾಯಿಸಿಕೊಂಡಿದ್ದು, ತಪಾಸಣೆಗೊಳಗಾದರು. ಇದರಲ್ಲಿ ತೀವ್ರ ಕಣ್ಣಿನ ನ್ಯೂನತೆಯಿರುವ 92 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 60 ಜನರನ್ನು ಭಾನುವಾರ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಉಳಿದ 32 ಜನರನ್ನು ಜೂ.7ರಂದು ಕರೆದೊಯ್ಯಲಿದ್ದಾರೆ.


ಇದೇ ವೇಳೆ ಕಳೆದ ಬಾರಿ ತಪಾಸಣೆಗೆ ಒಳಗಾಗಿದ್ದವರಿಗೆ ಕನ್ನಡಕವನ್ನು ವಿತರಿಸಲಾಯಿತು. ಶಿಬಿರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ.ಜನನಿ, ಶಿಬಿರದ ಮೇಲ್ವಿಚಾರಕ ಶ್ರೀಕಂಠಮೂರ್ತಿ, ಕ್ಷೇತ್ರಾಧಿಕಾರಿ ಸುನೀಲ್‌ಕುಮಾರ್, ಮುಖಂಡರಾದ ಲೋಕೇಶ್‌ಜತ್ತಿ, ಮಂಟೇಸ್ವಾಮಿ, ಚಂದ್ರಶೇಖರಮೂರ್ತಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net