ಕಣ್ಣಿನ ಆರೋಗ್ಯದತ್ತ ಗಮನಹರಿಸಿ

17blrp1
ಬೇಲೂರು ಪಟ್ಟಣ ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಡಾ.ನಾರಾಯಣಸ್ವಾಮಿ ಸಲಹೆ


ಬೇಲೂರು: ಮನುಷ್ಯರ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾಗಿದ್ದು, ಕಣ್ಣಿನ ಆರೋಗ್ಯದತ್ತ ಹೆಚ್ಚು ಗಮನಹರಿಸಬೇಕು ಎಂದು ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹೇಳಿದರು.


ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆ ಇಲ್ಲದಿದ್ದರೂ ಕನಿಷ್ಠ ವರ್ಷಕ್ಕೊಮ್ಮೆ ದೃಷ್ಟಿ ಪರೀಕ್ಷೆ ಮಾಡಿಸಬೇಕು. ಇದರಿಂದಾಗಿ ಕಣ್ಣಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳನ್ನು ಪತ್ತೆಹಚ್ಚಿ, ಚಿಕಿತ್ಸೆ ಕೊಡಿಸಲು ಸಹಕಾರಿ ಎಂದರು.


ಲಯನ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ಲತೀಪ್, ಕ್ಯಾಬಿನೆಟ್ ಸದಸ್ಯ ಡಾ.ಚಂದ್ರಮೌಳಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಸುರೇಶ್, ಖಜಾಂಚಿ ರವಿಕುಮಾರ್, ಗುರುಕುಲ ಟ್ರಸ್ಟ್ ಅಧ್ಯಕ್ಷ ವಿ.ಎಸ್.ಬೋಜೇಗೌಡ, ಕಾರ್ಯದರ್ಶಿ ಕೆ.ಎಲ್.ಸುರೇಶ್, ಖಜಾಂಚಿ ಲೋಕೇಶ್, ಕ್ಯಾಬಿನೆಟ್ ಸದಸ್ಯರಾದ ಡಾ.ಚಂದ್ರಮೌಳಿ, ಎಂ.ಪಿ.ಪೂವಯ್ಯ, ಉಮೇಶ್, ನೌಷದ್, ಆದರ್ಶ, ಮುಖ್ಯಶಿಕ್ಷಕ ರಘುರಾಮ್, ಪ್ರಸಾದ್, ಪದ್ಮಾವತಿ, ಅರ್ಜುನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net