ಕಣ್ಣಿ ಮಾರ್ಕೆಟ್​ ಬಳಿ ಬೈಕ್​ ಕಳ್ಳತನ

Crime_20250605010013932.jpg
Published on

ಕಲಬುರಗಿ: ನಗರದ ಕಣ್ಣಿ ಮರ‍್ಕೆಟ್​ ಬಳಿ ತರಕಾರಿ ಖರೀದಿಗೆ ಹೋದ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ ಟನೆ ಜೂ.೧ರಂದು ನಡೆದಿದೆ. ನ್ಯೂ ರಾವೇಂದ್ರ ಕಾಲನಿಯ ರಾಚಯ್ಯ ಸ್ವಾಮಿ ವಾಹನ ಕಳೆದುಕೊಂಡವರು. ತರಕಾರಿ ತರಲು ಕಣ್ಣಿ ಮರ‍್ಕೆಟ್​ಗೆ ಹೋಗಿದ್ದು, ರಸ್ತೆ ಬದಿ ವಾಹನ ನಿಲ್ಲಿಸಿ ಮರಳಿ ಬರುವ ಹೊತ್ತಿಗೆ ವಾಹನ ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ ಎಂದು ಅಶೋಕ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net