ಕಣಿವೆ ಆಂಜನೇಯಸ್ವಾಮಿ ಕಾರ್ತಿಕ ಅದ್ದೂರಿ

Kanive Aanjaneyaswamy
Published on

ಚಿತ್ರದುರ್ಗ: ಹೊರವಲಯದ ಕಣಿವೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಶನಿವಾರ ಭಕ್ತರ ಸಮ್ಮುಖದಲ್ಲಿ ಆಂಜನೇಯ, ಸುಬ್ರಹ್ಮಣ್ಯ ಸ್ವಾಮಿಯ 27ನೇ ವರ್ಷದ ಕಾರ್ತಿಕೋತ್ಸವ ಅದ್ದೂರಿಯಾಗಿ ನೆರವೇರಿತು.

ಆಂಜನೇಯಸ್ವಾಮಿಗೆ ವಿವಿಧ ಪುಷ್ಪ, ಹಣ್ಣು, ಹೂವಿನ ಹಾರಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು. ಸಾವಿರಾರು ಭಕ್ತರು ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು, ಕುಟುಂಬ ಮತ್ತು ಊರಿನ ಒಳಿತಿಗಾಗಿ ಪ್ರಾರ್ಥಿಸಿದರು.

ಸೀತಾರಾಮರ ಪಲ್ಲಕ್ಕಿ ಮಾರ್ಗದುದ್ದಕ್ಕೂ ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ನೆರೆದಿದ್ದವರು ಮಹಾಮಂಗಳಾರತಿ, ತೀರ್ಥ ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net