ಕಣದಿಂದಲೇ ಭತ್ತ ಖರೀದಿಸಿ

SRP_01-01jpg
ಶ್ರೀರಂಗಪಟ್ಟಣ ತಾಲೂಕಿನ ಸಬ್ಬನಕುಪ್ಪೆ ಹಾಗೂ ಮಲ್ಲೇಗೌಡನಕೊಪ್ಪಲು ಗ್ರಾಮಗಳಲ್ಲಿ 1 ಕೋಟಿ ರೂ. ವೆಚ್ಚದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.
Published on

ಶ್ರೀರಂಗಪಟ್ಟಣ: ಕೃಷಿ ಜಮೀನಿನ ಕಣದಲ್ಲಿ ಸಂಗ್ರಹಿಸಿರುವ ಭತ್ತವನ್ನು ನೇರವಾಗಿ ಖರೀದಿಸುವ ಮೂಲಕ ರೈತರು ದಲ್ಲಾಳಿಗಳಿಂದ ಅನುಭವಿಸುವ ನಷ್ಟವನ್ನು ತಡೆಗಟ್ಟಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕಿನ ಸಬ್ಬನಕುಪ್ಪೆ ಹಾಗೂ ಮಲ್ಲೇಗೌಡನಕೊಪ್ಪಲು ಗ್ರಾಮಗಳಲ್ಲಿ ಬುಧವಾರ 1 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ರೈತರು ಭತ್ತ, ರಾಗಿ ಸೇರಿದಂತೆ ಇತರ ಧಾನ್ಯಗಳನ್ನು ಸಂಗ್ರಹಿಸಲು ಸೂಕ್ತ ಗೋದಾಮು ವ್ಯವಸ್ಥೆ ಇಲ್ಲ. ಆದ್ದರಿಂದ ದಲ್ಲಾಳಿಗಳ ಮೊರೆ ಹೋಗುತ್ತಿದ್ದು, ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ನೇರವಾಗಿ ರೈತರ ಕಣದಿಂದಲೇ ಬೆಳೆ ಖರೀದಿ ಮಾಡಲು ಕ್ರಮವಹಿಸಬೇಕು ಎಂದು ಹೇಳಿದರು.

ಸಬ್ಬನಕುಪ್ಪೆ ಗ್ರಾಪಂ ಸದಸ್ಯ ಶಂಕರೇಗೌಡ, ಚಿದಂಬರ, ಮಾಜಿ ಅಧ್ಯಕ್ಷ ಮಲ್ಲೇಶ್, ಗ್ರಾಪಂ ಮಾಜಿ ಸದಸ್ಯ ಶಿವಕುಮಾರ್, ತಾಪಂ ಮಾಜಿ ಸದಸ್ಯ ಪ್ರಕಾಶ್, ಸಬ್ಬನಕುಪ್ಪೆ, ರೈಸ್‌ಮಿಲ್ ನಾಗರಾಜು, ರಾಮಣ್ಣ, ಮಹದೇವು, ಗುತ್ತಿಗೆದಾರ ರಾಜೇಗೌಡ, ಚಂದ್ರು, ರಮೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net