

ನಾಪೋಕ್ಲು: ಚೆನ್ನೈನಲ್ಲಿ ಆ.23, 24 ರಂದು ನಡೆದ ಬ್ರೈನೊಬ್ರೈನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕೊಟ್ಟೂರು ಚೇರಂಬಾಣಿ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಕಡ್ಲೇರ ಲಿಖಿತ್ ಸೋಮಣ್ಣ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾನೆ.
ಬ್ರೈನೋಬ್ರೈನ್‌ನಲ್ಲಿ ಒಟ್ಟು ಹತ್ತು ಹಂತಗಳಿದ್ದು, ಎಂಟು ಹಂತಗಳಲ್ಲಿ ಭಾಗವಹಿಸಿ, ರಾಜ್ಯಮಟ್ಟದಲ್ಲಿ 3 ಬಾರಿ, ರಾಷ್ಟ್ರಮಟ್ಟದಲ್ಲಿ 2 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಬಾರಿ ಭಾಗವಹಿಸಿ, 4 ಚಾಂಪಿಯನ್ ಟ್ರೋಫಿ, ಮೂರು ಚಿನ್ನದ ಪದಕ ಪಡೆದುಕೊಂಡಿದ್ದಾನೆ.
ಲಿಖಿತ್ ಸೋಮಣ್ಣ , ಬ್ರೈನೊಬ್ರೈನ್ ಸ್ಪರ್ಧೆಗಳಲ್ಲಿ 25 ರಿಂದ 40 ಸಮಸ್ಯೆಗಳನ್ನು ಆಫ್‌ಲೈನ್‌ನಲ್ಲಿ ಮೂರು ನಿಮಿಷ ಹಾಗೂ ಆನ್‌ಲೈನ್ ನಲ್ಲಿ ನಾಲ್ಕು ನಿಮಿಷಗಳಲ್ಲಿ ಮುಗಿಸುವ ನೈಪುಣ್ಯತೆ ಪಡೆದಿದ್ದಾನೆ.
ಈತ ಬೆಟ್ಟಗೇರಿ ಗ್ರಾಮದ ಕಡ್ಲೇರ ಲೋಕೇಶ್ ಕುಮಾರ್ ಮತ್ತು ವೃಂದಾ ದಂಪತಿಯ ಪುತ್ರ. ಲಿಖಿತ್ ಸೋಮಣ್ಣ ಮಡಿಕೇರಿಯಲ್ಲಿ ಮಾಪಂಗಡ ಕವಿತಾ ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾನೆ.