ಕಡ್ಡಾಯವಾಗಿ ಮತದಾನ ಮಾಡಿ

14 HANUR 3
ಅರ್ಧನಾರಿಪುರ ಗಿರಿಜನರ ಗ್ರಾಮಕ್ಕೆ ಎಸ್ಪಿ ಪದ್ಮಿನಿ ಸಾಹೊ ಭೇಟಿ ನೀಡಿ ಮತದಾನ ಮಾಡುವಂತೆ ಅರಿವು ಮೂಡಿಸಿದರು.
Published on

ಹನೂರು: ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಮನವಿ ಮಾಡಿದರು.

ತಾಲೂಕಿನ ಗಡಿಗ್ರಾಮ ಅರ್ಧನಾರಿಪುರಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಗಿರಿಜನರೊಂದಿಗೆ ಮಾತನಾಡಿ, ಮತದಾನ ನಿಮ್ಮ ಹಕ್ಕು. ತನ್ನದೇ ಆದ ಮಹತ್ವವನ್ನು ಹೊಂದಿದೆ. ಆದ್ದರಿಂದ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ನಿರ್ಭೀತಿಯಿಂದ ಮತ ಚಲಾಯಿಸಬೇಕು. ಒಂದು ವೇಳೆ ಸಮಸ್ಯೆಯಾದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕು. ಜತೆಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಇತರರಿಗೂ ತಿಳಿಸಬೇಕು. ಈ ಮೂಲಕ ಯಶಸ್ವಿ ಚುನಾವಣೆಗೆ ಸಹಕರಿಸಬೇಕು ಎಂದರು.

ಬಳಿಕ ಚೆಕ್‌ಪೋಸ್ಟ್‌ಗೆ ತೆರಳಿದ ಅವರು, ಈ ಮಾರ್ಗದಲ್ಲಿ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಮಾಹಿತಿ ದಾಖಲಿಸಬೇಕು. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮತಗಟ್ಟೆಗೂ ಭೇಟಿ ನೀಡಿ ಮೂಲ ಸೌಕರ್ಯ ಸಂಬಂಧ ಪರಿಶೀಲನೆ ನಡೆಸಿದರು.

ಇನ್ಸ್‌ಪೆಕ್ಟರ್ ಶಶಿಕುಮಾರ್, ಮುಖ್ಯ ಪೇದೆಗಳಾದ ದೊಡ್ಡವೀರಶೆಟ್ಟಿ, ರಾಘವೇಂದ್ರ, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net