ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯಿರಿ

04 yelandur 01
ಯಳಂದೂರು ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಪರವಾನಗಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸುಬ್ರಹ್ಮಣ್ಯ, ಲಕ್ಷ್ಮೀ, ರೇಖಾ ಇತರರಿದ್ದರು.
Published on

ಯಳಂದೂರು: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರು ಕಡ್ಡಾಯವಾಗಿ ಪಟ್ಟಣ ಪಂಚಾಯಿತಿಯಿಂದ ಉದ್ದಿಮೆ ಪರವಾನಗಿ ಪಡೆಯಬೇಕು ಎಂದು ಪ.ಪಂ. ಕಿರಿಯ ಆರೋಗ್ಯ ನಿರೀಕ್ಷಕ ಸುಬ್ರಹ್ಮಣ್ಯ ಹೇಳಿದರು.

ದಿನಸಿ ಅಂಗಡಿ, ಬಾರ್, ವೈನ್‌ಶಾಪ್, ಹೋಟೆಲ್, ಸೈಕಲ್‌ಶಾಪ್ ಸೇರಿದಂತೆ ಪಟ್ಟಣದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ಮಂಗಳವಾರ ಭೇಟಿ ನೀಡಿ ಪರವಾನಗಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದಲ್ಲಿ ಅಂದಾಜು 400ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿವೆ. ಎಲ್ಲರೂ ಪರವಾನಗಿ ಪಡೆದಿಲ್ಲ. ಆದರೆ, ನಿಯಮಾನುಸಾರ ಕಡ್ಡಾಯವಾಗಿ ಪರವಾನಗಿ ಪಡೆದೇ ವ್ಯಾಪಾರ ವಹಿವಾಟು ನಡೆಸಬೇಕು. ಈ ಬಗ್ಗೆ ಉದ್ದಿಮೆ ನಡೆಸುತ್ತಿರುವ ಮಳಿಗೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ನಾಮಫಲಕವನ್ನು ಕನ್ನಡದಲ್ಲೇ ಹಾಕಬೇಕು. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ಹೇಳಿದರು. ಪಪಂ ಸಿಬ್ಬಂದಿ ಲಕ್ಷ್ಮೀ, ರೇಖಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net