ಕಡ್ಡಾಯ ಮತದಾನ ಕುರಿತು ಅಭಿಯಾನ

16arsph1ep
Published on


ಹಾಸನ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಅರಸೀಕೆರೆ ನಗರದ ವಿವಿಧ ರಸ್ತೆಗಳಲ್ಲಿ ಮತದಾನ ನಮ್ಮ ಹಕ್ಕು, ನೈತಿಕ ಹಾಗೂ ಕಡ್ಡಾಯ ಮತದಾನ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಬಿಸಿಎ ಅಧಿಕಾರಿ ನಾರಾಯಣಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಹಕ್ಕು ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ. ಸುಭದ್ರ ಹಾಗೂ ಸಮರ್ಥ ಆಡಳಿತ ನಡೆಸುವಂತಾಗಲು ಮೇ10ರಂದು ತಪ್ಪದೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ, ಪೇಟೆಬೀದಿ, ಶಾನುಭೋಗರ ಬೀದಿ ಸೇರಿ ಹಲವೆಡೆ ಜಾಗೃತಿ ಅಭಿಯಾನ ನಡೆಯಿತು.


ಚಂದ್ರಕಲಾ, ಮಾರುತಿ, ಕಂದಾಯ ಅಧಿಕಾರಿ ಸೋಮಶೇಖರ್,ನವೀನ್, ವಿನಯ್, ರಾಜಶೇಖರ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net