ಕಡೇಗರ್ಜೆಯಲ್ಲಿ ಶನೈಶ್ಚರ ಜಾತ್ರಾ ಮಹೋತ್ಸವ

Published on

ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ಕಡೇಗರ್ಜೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿಯ 9ನೇ ವರ್ಷದ ಜಾತ್ರಾ ಮಹೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು.

ಜಾತ್ರೆ ಅಂಗವಾಗಿ ಶುಕ್ರವಾರದಿಂದಲೇ ಗಂಗಾ ಪೂಜೆ, ರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ ಪೂಜೆ, ಮಹಾ ಮಂಗಳಾರತಿಯೊಂದಿಗೆ ಪೂಜಾ ಕಾರ್ಯಗಳು ನೆರವೇರಿದರೆ ಶನಿವಾರ ದೇಗುಲದಲ್ಲಿ ಬೆಳಗ್ಗೆ ವಿವಿಧ ಪೂಜಾ ಕಾರ್ಯಗಳೊಂದಿಗೆ ದೇವರ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ದೇಗುಲದ ಆವರಣದಲ್ಲಿ ಕೊಂಡೋತ್ಸವ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಪ್ರಧಾನ ಅರ್ಚಕ ಅಶೋಕ ಸ್ವಾಮಿ, ದೇವಸ್ಥಾನದ ಕಾರ್ಯದರ್ಶಿ ಶಿವರಾಜ್, ಪದಾಧಿಕಾರಿಗಳಾದ ಮಧು, ರಕ್ಷಿತ್, ಜೀವನ್, ಪ್ರತೀಕ್, ದರ್ಶನ್, ಮಂಜು, ಶಶಾಂಕ್, ಅರ್ಜುನ್, ಸಚಿನ್, ಪ್ರೇಮ್, ಮಿಥುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net