ಕಡೂರಿನಲ್ಲಿ ಗುರುಭವನ ನಿರ್ವಣಕ್ಕೆ ನಿವೇಶನ

10KDR2 web
Published on

ಕಡೂರು: ಪಟ್ಟಣದಲ್ಲಿ ಗುರುಭವನ ನಿರ್ವಣಕ್ಕೆ ನಿವೇಶನ ಮಂಜೂರು ಮಾಡುವುದರ ಜತೆಗೆ 50 ಲಕ್ಷ ರೂಪಾಯಿ ವಿಶೇಷ ಅನುದಾನವನ್ನು ಭವನ ನಿರ್ವಣಕ್ಕೆ ನೀಡಲಾಗುವುದು ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ಕಡೂರು ಶೈಕ್ಷಣಿಕ ವಲಯದಿಂದ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ 61ನೇ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಮುಂದಿನ ಶಿಕ್ಷಕರ ದಿನ ಸಮಾರಂಭವನ್ನು ಗುರುಭವನದಲ್ಲಿ ಆಚರಿಸಲು ಮತ್ತೆ ಶಾಸಕನಾಗಿ ಆಯ್ಕೆಗೊಂಡು ಲೋಕಾರ್ಪಣೆ ಮಾಡಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುರುಕುಲ ವಿದ್ಯಾಭ್ಯಾಸದಿಂದ ಇಲ್ಲಿಯ ಶಿಕ್ಷಣದವರೆಗೆ ಶಿಕ್ಷಕರ ಪಾತ್ರ ದೊಡ್ಡದು. ಸರ್ಕಾರ ಪ್ರತಿ ವರ್ಷ ಶೇ.20 ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡುತ್ತದೆ. ಪ್ರತಿ ಮಗುವಿಗೆ 3 ಸಾವಿರ ರೂ. ಖರ್ಚು ಮಾಡುತ್ತದೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದರು.

ಭದ್ರಾ ಯೋಜನೆಯಿಂದ ಕ್ಷೇತ್ರದ ಎಲ್ಲ ಶಾಲೆಗಳಿಗೆ ನೀರು ದೊರಕಲಿದೆ. ಶಾಲೆಗಳಿಗೆ ಕಾಂಪೌಂಡ್, ಶೌಚಗೃಹ, ದಾಸೋಹ ಕೊಠಡಿಗಳ ನಿರ್ವಣದ ಜತೆಗೆ ವಿಶಾಲವಾದ ಆಟದ ಮೈದಾನದ ಅಭಿವೃದ್ಧಿಗೆ 5 ಲಕ್ಷ ರೂ. ನೀಡುವುದರ ಮೂಲಕ ರಾಜ್ಯದಲ್ಲಿಯೇ ಮಾದರಿ ಶಿಕ್ಷಣ ನೀಡುವ ಉದ್ದೇಶ ಜಿಪಂ ಹೊಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net