ಕಡು ಬಡತನದಲ್ಲಿ ಅರಳಿದ ಪ್ರತಿಭೆ

12NDR1
Published on

ನಂದೇಶ್ವರ: ಗ್ರಾಮದ ಅರ್ಪಿತಾ ಶಂಕರ ಜನವಾಡ ಪಿಯುಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ಶೇ.೯೩.೬೬ ಅಂಕ ಗಳಿಸುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

ಅಥಣಿ ತಾಲೂಕಿನ ನಂದೇಶ್ವರದಿಂದ ಜಮಖಂಡಿ ಸಮೀಪದ ಹುನ್ನೂರು ಸರ್ಕಾರಿ ಕಾಲೇಜಿಗೆ ದಿನ ನಿತ್ಯ ತೆರಳಿ ಅಧ್ಯಯನ ಮಾಡಿದ್ದಾಳೆ. ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯು ವಿಶೇಷ ಸಾಧನೆ ಮಾಡಿದ್ದಾಳೆ. ಇವರ ತಾಯಿಗೆ ೫ ಮಕ್ಕಳಿದ್ದು ೩ನೇ ಮಗಳಾದ ಇವಳನ್ನು ಕೂಲಿ ಮಾಡಿ ಓದಿಸಿದ್ದಾರೆ. ತಾಯಿ ದುಡಿದರೆ ಮಾತ್ರ ಇವರ ಕುಟುಂಬದ ನಿವರ್ಹಣೆಯಾಗುತ್ತದೆ. ತಾಯಿಯ ಕಷ್ಟದ ಜೀವನ ನೋಡಿ ಏನಾದರೂ ಸಾಧನೆ ಮಾಡಿ ಕುಟುಂಬಕ್ಕೆ ನೆರವಾಗಲು ವಿದ್ಯಾರ್ಥಿನಿ ಸಂಕಲ್ಪ ಮಾಡಿಕೊಂಡಿದ್ದಾಳೆ.

ಗ್ರಾಮದ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ವೇದ ಸಂಗೀತ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತವನ್ನೂ ಕಲಿತಿರುವ ಈ ವಿದ್ಯಾರ್ಥಿನಿ ಸಂಸ್ಕೃತ ಭಾಷೆಯಲ್ಲಿ ವಿಶೇಷ ಸಾಧನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net