ಕಡಿಮೆಯಾದ ಸಾಹಿತ್ಯ ಓದುವ ಹವ್ಯಾಸ

mysore
Published on

ಮೈಸೂರು: ಸಾಹಿತ್ಯ ಕೃತಿಗಳ ಓದುವ ಹವ್ಯಾಸ ಕಡಿಮೆಯಾಗಿದ್ದು, ಪುಸ್ತಕಗಳ ಮಾರಾಟವೂ ಸವಾಲಿನ ಕೆಲಸವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ವಿ.ಜವರಯ್ಯ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸಕ ಡಿ.ಪಿ.ಚಿಕ್ಕಣ್ಣ ಅವರು ದಾಪುಚಿ ಕಾವ್ಯನಾಮದಲ್ಲಿ ರಚಿಸಿದ ‘ಲೋಚನದ ಸಿರಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಸ್ತಕಗಳು ಜೀವನದ ಉತ್ತಮ ಸಂಗಾತಿ. ಇದನ್ನು ಯಾರೂ ಮರೆಯಬಾರದು. ಕಾವ್ಯ ಓದುವ ಮೂಲಕ ಮನುಷ್ಯ ಉತ್ತಮ ಗುಣವನ್ನು ಮೈಗೂಡಿಸಿಕೊಳ್ಳಬಹುದು. ಕಾವ್ಯದ ಉದ್ದೇಶವೇ ಸಮಾಜದಲ್ಲಿ ಉದಾತ್ತ ಮೌಲ್ಯ ಬಿತ್ತುವುದಾಗಿದೆ ಎಂದರು.

ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಪ್ರಕಾಶಕ ಡಿ.ಎನ್.ಲೋಕಪ್ಪ, ಸೌಭಾಗ್ಯ ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಸೌಭಾಗ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಾಲುಂಡಿ ಎಸ್.ದೊರೆಸ್ವಾಮಿ, ಜಿ.ಕೆ.ರೂಪಶ್ರೀ ಚಿಕ್ಕಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net