ಕಡಿಮೆ ಬಾಡಿಗೆ ವಿಧಿಸಲು ತಿಂಡಿಗಾಡಿ ಮಾಲೀಕರ ಸಂಘ ಮನವಿ

14 ckm 6
ಚಿಕ್ಕಮಗಳೂರು ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ಆಜಾದ್ ಪಾರ್ಕ್ ತಿಂಡಿಗಾಡಿ ಮಾಲೀಕರ ಸಂಘದ ಪದಾಧಿಕಾರಿಗಳು ನಗರಸಭೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಫುಡ್‌ಕೋರ್ಟ್ನಲ್ಲಿ ಅತಿ ಹೆಚ್ಚು ಬಾಡಿಗೆ, ಮುಂಗಡ ಹಣ ವಿಧಿಸಿರುವುದನ್ನು ಖಂಡಿಸಿ ಕಡಿಮೆ ಮಾಡುವಂತೆ ಒತ್ತಾಯಿಸಿದರು. ಸುರೇಶ್ ಬಾಬು,ಗಿರೀಶ್, ರಾಜೇಶ್, ಕಿರಣ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರಸಭೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಫುಡ್‌ಕೋರ್ಟ್ನಲ್ಲಿ ಅತಿ ಹೆಚ್ಚು ಬಾಡಿಗೆ, ಮುಂಗಡ ಹಣ ವಿಧಿಸಿರುವುದನ್ನು ಖಂಡಿಸಿ ಕಡಿಮೆ ಮಾಡುವಂತೆ ಒತ್ತಾಯಿಸಿ ಆಜಾದ್ ಪಾರ್ಕ್ ತಿಂಡಿಗಾಡಿ ಮಾಲೀಕರ ಸಂಘದ ಪದಾಧಿಕಾರಿಗಳು ಗುರುವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶ್ ಬಾಬು, ನಾವುಗಳು ಸುಮಾರು ೪೦ ವರ್ಷಗಳಿಂದ ಆಜಾದ್ ಪಾರ್ಕ್ನಲ್ಲಿ ಒಟ್ಟು ೬೨ ತಿಂಡಿ ಗಾಡಿಗಳನ್ನು ಇಟ್ಟುಕೊಂಡು ಕಷ್ಟದಿಂದ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿz್ದೆÃವೆ. ಇದರಲ್ಲಿ ಬರುವಂತಹ ಆದಾಯದಿಂದ ನಮ್ಮಗಳ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ ಎಂದು ತಿಳಿಸಿದರು.

ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ನಗರಸಭೆ ವತಿಯಿಂದ ಹೊಸದಾಗಿ ನಿರ್ಮಾಣ ಮಾಡಿರುವ ಆಹಾರ ಮಳಿಗೆಯನ್ನು ನಮ್ಮಗಳಿಗೆ ನೀಡಲು ತೀರ್ಮಾನಿಸಿದೆ. ಆದರೆ ಸದರಿ ಮಳಿಗೆಗಳಿಗೆ ಮಾಹೆಯಾನ ೮ ಸಾವಿರ ರೂ.ಗಳ ಬಾಡಿಗೆಯನ್ನು ನಿಗದಿ ಮಾಡಲಾಗಿದೆ. ಜೊತೆಗೆ ಮುಂಗಡವಾಗಿ ೨ ಲಕ್ಷಗಳನ್ನು ನೀಡುವಂತೆ ಮೌಖಿಕÀವಾಗಿ ತಿಳಿಸಿದ್ದಾರೆ ಎಂದರು.

ಈವರೆಗೆ ನಗರಸಭೆಗೆ ಸುಂಕದ ರೂಪದಲ್ಲಿ ರೂ ೧೦ ಹಾಗೂ ಕಸದ ಶುಲ್ಕ ರೂ ೨೦ ಗಳು ಒಟ್ಟು ಪ್ರತಿದಿನ ೩೦ ರೂಗಳನ್ನು ಪಾವತಿಸಿಕೊಂಡು ಬರುತ್ತಿz್ದÉÃವೆ. ಆದರೆ ನಗರ ಸಭೆಯವರು ನಿಗಧಿಮಾಡಿರುವ ಬಾಡಿಗೆ ಮೊತ್ತವನ್ನು ಕಟ್ಟಲು ಅಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆದ್ದರಿಂದ ಜಿಲ್ಲಾಡಳಿತ ದಯಮಾಡಿ ಮಾಹೆಯಾನ ಪ್ರತಿ ಮಳಿಗೆಗೆ ಬಾಡಿಗೆ ೨೦೦೦ ರೂ. ಹಾಗೂ ಮುಂಗಡ ಹಣ ೨೦ ಸಾವಿರ ರೂ. ನಿಗದಿ ಮಾಡಿದರೆ ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಿರೀಶ್, ಖಜಾಂಚಿ ರಾಜೇಶ್, ಸದಸ್ಯರಾದ ಕಿರಣ್ ಕುಮಾರ್, ಶಾಂತಕುಮಾರ್, ಪರಮೇಶ್, ಚೇತನ್, ಚೌಡಪ್ಪ, ರಾಘವೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net