

ಬಸವಕಲ್ಯಾಣ : ಅಂಚೆ ರಫ್ತು ಕೇಂದ್ರ ಇಲ್ಲಿನ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು, ಉದ್ದಿಮೆದಾರರಿಗೆ ಸರಳ ರೀತಿಯಲ್ಲಿ ಡಿಎನ್‌ಕೆ ವಿಭಾಗದಲ್ಲಿ ನೋಂದಣಿ ಮಾಡಿ ಕಡಿಮೆ ದರದಲ್ಲಿ ವ್ಯವಹಾರ ಮಾಡಲು ಅನುಕೂಲ ಕಲ್ಪಿಸಲಿದೆ ಎಂದು ಬೀದರ್ ವಿಭಾಗ ಅಂಚೆ ಅಧೀಕ್ಷಕ ಶ್ರೀಕರ ಬಾಬು ಹೇಳಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ರಫ್ತು ಕೇಂದ್ರಕ್ಕೆ ಗುರುವಾರ ಪ್ರಥಮ ಗ್ರಾಹಕ ವಿನೋದ ಪಾಟೀಲ್ ಜತೆ ಚಾಲನೆ ನೀಡಿ ಮಾತನಾಡಿದ ಅವರು, ಗುರು ಬಸವಣ್ಣನವರ ಕಾಯಕ ಕಾಯಕ ಭೂಮಿಯಲ್ಲಿ ಕೇಂದ್ರ ಆರಂಭವಾಗಿದ್ದು ಸಂತಸ ತಂದಿದೆ. ಇನ್ನು ಗ್ರಾಹಕರು ಕ್ಲಿಯರೆನ್ಸ್ , ಪಾರ್ಸೆಲ್ ಸ್ಥಿತಿಗತಿಯನ್ನು ಯಾವುದೇ ಸಮಯದಲ್ಲಿ ಡಿಎನ್‌ಕೆ ಪೋರ್ಟಲ್ ಮೂಲಕ ಲಾಗಿನ್ ಆಗಿ ತಿಳಿದುಕೊಳ್ಳಬಹುದು ಎಂದರು.
ಬಸವಕಲ್ಯಾಣ ಅಂಚೆ ಪಾಲಕ ವಿಜಯಕುಮಾರ ಬನಗುಂಡಿ, ಬೀದರ್ ಉಪ ಅಂಚೆ ಅಧೀಕ್ಷಕ ಶ್ರೀಧರ ಎಚ್, ಅಂಚೆ ನಿರೀಕ್ಷಕರಾದ ಮಹಾಂತೇಶ ಕುರ್ಲೆ, ಈರಪ್ಪ ಬಡಿಗಾರ, ಕಲ್ಲಪ್ಪ ಕೋಣಿ, ದಾನಪ್ಪ ಆರ್.ಟಿ., ಘಾಳೆಪ್ಪ, ಮಂಜುನಾಥ, ಉಮೇಶ ಇತರರಿದ್ದರು. ಭರತ ವಾಘಮಾರೆ ಸ್ವಾಗತಿಸಿ ನಿರೂಪಣೆ ಮಾಡಿದರು.