ಕಡವೆ ಚರ್ಮ ಸಹಿತ ಆರೋಪಿ ಬಂಧನ

IMG-20230716-WA0140
Published on

ಹನೂರು: ತಾಲೂಕಿನ ಜಲ್ಲಿಪಾಳ್ಯ ಗ್ರಾಮದ ಮನೆಯೊಂದರ ಮೇಲೆ ಶನಿವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಡವೆ ಚರ್ಮ ಹಾಗೂ ಕಾಲುಗಳನ್ನು ಸಂಗ್ರಹಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮದ ಈಶ್ವರನ್ ಅಲಿಯಾಸ್ ರಾಜು ಬಂಧಿತ. ಖಚಿತ ಮಾಹಿತಿ ಮೇರೆಗೆ ಆರ್‌ಎಫ್‌ಒ ಗಿರಿಧರ, ಡಿ ಆರ್ ಎಫ್‌ಒ ಗಿರೀಶ, ಅರಣ್ಯ ಪಾಲಕರಾದ ಅಮೀರ್ ಹಾಗೂ ಕಾಶಿಲಿಂಗ ಅವರ ತಂಡ ದಾಳಿ ನೇತೃತ್ವ ವಹಿಸಿತ್ತು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net