

ಚಿಕ್ಕಮಗಳೂರು: ತಾಲೂಕಿನ ಕಡವಂತಿ ಗ್ರಾಪಂ ಅಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಸಿಪಿಐ ಪಕ್ಷದ ಗೀತಾ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿಯಲ್ಲಿ ಒಟ್ಟು ೭ ಸದಸ್ಯರ ಬಲವಿದೆ. ಈ ಪೈಕಿ ಕಾಂಗ್ರೆಸ್ ೪, ಸಿಪಿಐ ೧ ಹಾಗೂ ಬಿಜೆಪಿ ೨ ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಸಿಪಿಐ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದರಿAದಾಗಿ ಬಹುಮತ ಸಾಬೀತಾಗಿ ಗೀತಾ ಹೆಸರು ಸೂಚಿಸಿದ ಮೇರೆಗೆ ಚುನಾವಣಾಧಿಕಾರಿ ತಾಪಂ ಇಓ ವಿಜಯ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಭಾಗ್ಯಲಕ್ಷಿö್ಮÃ, ರಂಗಪ್ಪಶೆಟ್ಟಿ, ಧನಲಕ್ಷಿö್ಮÃ, ಕೃಷ್ಣಮೂರ್ತಿ, ಪಿಡಿಓ ಸಹದೇವ್, ಸಿಪಿಐ ಮುಖಂಡರಾದ ಎನ್.ಆರ್.ಮಂಜುನಾಥ್, ಬಿ.ಡಿ.ಕೃಷ್ಣ ಮತ್ತಿತರರಿದ್ದರು.