

ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಕಡಬಗೆರೆ ಬಳಿ ಶನಿವಾರ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.
ಕಡಬಗೆರೆ ನಿತಿನ್ ಸಾಲ್ಡಾನ ಎಂಬುವರ ತೋಟದ ಬಳಿಯಲ್ಲಿ ಕಾಡಾನೆ ಬಂದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಾಳೆಹೊನ್ನೂರು, ಖಾಂಡ್ಯ ಹಾಗೂ ಮೇಗುಂದಾ ಹೋಬಳಿಯ ವಿವಿಧೆಡೆ ನಿರಂತರವಾಗಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿನಿತ್ಯ ಕಾಡಾನೆಗಳ ಹಾವಳಿಯಿಂದ ಅಪಾರ ಬೆಳೆ ನಷ್ಟವಾಗುತ್ತಿದೆ.