ಕಡಬ ಐತ್ತೂರುನಲ್ಲಿ ಮೇಯಲು ಬಿಟ್ಟ ಆಡಿನ ಮೇಲೆ ಚಿರತೆ ದಾಳಿ

IMG-20210425-WA0049
Published on

ಕಡಬ : ಕಡಬ ತಾಲೂಕಿನ ಐತ್ತೂರು‌ ಗ್ರಾಮದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಭಾನುವಾರ ಸಂಜೆ ಚಿರತೆ ದಾಳಿ‌ ಮಾಡಿ ಪರಾರಿಯಾಗಿದೆ.

ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ವಾಪಾಸು ಮನೆಗೆ ಕರೆತರಲು ರಾಘವ ಅವರ ಮಗ ಧನಂಜಯ ಅವರು ತೆರಳಿದ್ದರು. ಈ ವೇಳೆ ಸಂಜೆ 5:30 ರ ಹೊತ್ತಿಗೆ ಧೀಡರನೇ ಪೊದೆಯಂಚಿನಿಂದ ಧುಮುಕಿ ಬಂದ ಚಿರತೆ ದೊಡ್ಡ ಆಡಿನ ಮೇಲೆ ದಾಳಿ‌ ಮಾಡಿ ಪರಾರಿಯಾಗಿದೆ.

ಪಕ್ಕದಲ್ಲಿ ಕೆ.ಎಫ್.ಡಿ.ಸಿ ರಬ್ಬರ್ ನಿಗಮದ ರಬ್ಬರ್ ತೋಟವಿದ್ದು ಅಲ್ಲೆ ಚಿರತೆ ಅವಿತಿರಬಹುದೆಂದು ಸಂಶಯ ಪಡಲಾಗಿದೆ. ಆಡಿನ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ತಿಳಿದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net