18 ಕಾಡಾನೆಗಳನ್ನು ಕಾಡಿಗಟ್ಟಿದ ಕಾರ್ಮಿಕರು

ಚಿತ್ರ 14ಎಸ್ ಡಿ ಪಿ 4
ಇಂದು, ನಾಳೆ ಕಾರ್ಯಾಚರಣೆ ಸಿದ್ದಾಪುರ: ವಿರಾಜಪೇಟೆ ಹಾಗೂ ಅಮ್ಮತ್ತಿ ವ್ಯಾಪ್ತಿಯ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಮಾ.15, 16ರಂದು ಹಮ್ಮಿಕೊಂಡಿರುವುದರಿಂದ ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ವಿರಾಜಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹಲವು ದಿನಗಳಿಂದ ಗದ್ದೆ ಹಾಗೂ ತೋಟಗಳಿಗೆ ಲಗ್ಗೆ ಇಟ್ಟು ಫಸಲು ನಾಶ ಮಾಡುತ್ತಿದ್ದು, ಗ್ರಾಮಸ್ಥರ ಮನವಿಯ ಮೇರೆಗೆ ಕುತ್ತೂರು, ಬೆಳ್ಳರಿಮಾಡು, ಕದನೂರು, ಪುದುಕೋಟೆ, ಐಮಂಗಲ, ಮಗ್ಗುಲ, ಬಿಟ್ಟಂಗಾಲ, ದೇವಣಗೇರಿ, ಚಂಬೆಬೆಳ್ಳೂರು, ಕಾವಾಡಿ, ಕಣ್ಣಂಗಾಲ, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಓಡಿಸಲು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Published on

ಸಿದ್ದಾಪುರ: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ 18 ಕಾಡಾನೆಗಳನ್ನು ತೋಟದ ಕಾರ್ಮಿಕರೇ ಗುರುವಾರ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಲ್ಪಿ ಕಾಫಿ ತೋಟದಲ್ಲಿ ಹಾಡಗಲಿನಲ್ಲೇ ಮರಿಯಾನೆಗಳೊಂದಿಗೆ 18 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದವು.

ತೋಟ ಕೆಲಸಕ್ಕೆ ತೆರಳುವ ಮುನ್ನ ಕಾರ್ಮಿಕರಾದ ಗಣೇಶ್, ಪವನ್ ಎಂಬವರಿಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷಕೊಂಡವು. ತಕ್ಷಣ ಇತರ ಕಾರ್ಮಿಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟ ಕೆಲಸಕ್ಕೆ ಬಂದ ವಿಕ್ರಂ, ರಾಜ, ಕಿಟ್ಟಿ, ರಘು ಸೇರಿದಂತೆ ಇತರ ಕಾರ್ಮಿಕರು ಕಾಡಾನೆಗಳ ಗುಂಪನ್ನು ಕಂಡು ಭಯಗೊಂಡಿದ್ದರು. ಕಾಡಾನೆಗಳ ಹಾವಳಿಯಿಂದ ಒಂದು ದಿನದ ಕೆಲಸ ಇಲ್ಲದಂತಾಗುತ್ತದೆ ಎಂದು ಭಾವಿಸಿ ಧೈರ್ಯ ತೋರಿದ ಕಾರ್ಮಿಕರು, ಮರದ ಮೇಲೆ ಹತ್ತಿ ಕಿರುಚುವ ಶಬ್ದ ಮಾಡುವ ಮೂಲಕ ಬೇರ್ಪಟ್ಟ ಆನೆಗಳನ್ನು ಒಂದುಗೂಡಿಸಿ ಶಿಲ್ಪಿ ಕಾಫಿ ತೋಟದಿಂದ ಚಿಕ್ಕನಹಳ್ಳಿ ಮಾರ್ಗವಾಗಿ ಒಂದು ಕಿ.ಮೀ.ವರೆಗೆ ಆನೆಗಳನ್ನು ಹಿಮ್ಮಟ್ಟಿಸಿಕೊಂಡು ಸಮೀಪದ ದುಬಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net