ಕಡಕೋಳ ಮಡಿವಾಳಪ್ಪ ಪ್ರಾಧಿಕಾರ ರಚಿಸಿ

02
Published on

ಯಾದಗಿರಿ : ಕಡಕೋಳ ಮಡಿವಾಳಪ್ಪನವರ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಮಂಗಳವಾರ ಇಲ್ಲಿ ಮನವಿ ಸಲ್ಲಿಸಿ ಒಕ್ಕೂಟದ ಕರ‍್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ಈ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ ಮತ್ತು ಬುಡಕಟ್ಟು ಸೇರಿ ಹಲವು ಪ್ರಕಾರದ ಕಲಾವಿದರು ನಿರಂತರವಾಗಿ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲೂ ಅನೇಕ ಪ್ರತಿಭಾವಂತರಿದ್ದು, ರಾಜ್ಯ, ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ತಮ್ಮ ಕಲೆ ಪ್ರದರ್ಶಿಸಿ ಬಂದಿದ್ದಾರೆ. ಆದರೂ ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂದರು.

ರಾಜ್ಯ ಸರ್ಕಾರ ಹಲವು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗAಪೇಟೆಯ ಕನ್ನಡದ ಕಟ್ಟಾಳು ದಿ.ಎಂ.ಆರ್.ಬುದ್ಧಿವAತ ಶೆಟ್ಟಿ ಅವರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಬೇಕು. ಹಲಸಂಗಿ ಪರಿಸರದ ಜನಪದ ಕವಿಗಳ ಪ್ರತಿಷ್ಠಾನ ಮಾದರಿಯಲ್ಲಿ ಜಿಲ್ಲೆಯ ಅಮ್ಮಾಪುರ ಪರಿಸರದ ಜನಪದ ಕವಿಗಳ ಪ್ರತಿಷ್ಠಾನ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಂಪಿ ಉತ್ಸವ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸಗರನಾಡು ಉತ್ಸವ ಸರ್ಕಾರದಿಂದ ಆಯೋಜಿಸಬೇಕು. ಮೈಸೂರು ಮತ್ತು ಬೆಂಗಳೂರು ವಿಭಾಗದ ಕಲಾವಿದರಿಗೆ ನಿಡುತ್ತಿರುವ ಗುರುತಿನ ಚೀಟಿಯನ್ನು ಕಲ್ಯಾಣ ಭಾಗದ ಕಲಾವಿದರಿಗೂ ವಿತರಿಸಬೇಕು ಎಂದು ಆಗ್ರಹಿಸಿದರು.
ಹಣಮಂತ್ರಾಯ ದೇವತ್ಕಲ್, ಶಂಕರ ಶಾಸೀ, ಲಿಂಗರಾಜ ಮಂಜಲಾಪುರ, ಪರಮಣ್ಣಗೌಡ, ಅಂಬ್ರೇಶ ಮುಷ್ಟಳ್ಳಿ, ಶಿವಶರಣಪ್ಪ ಹೆಡಿಗಿನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net