ಕಠಿಣ ಪರಿಶ್ರಮದಿಂದ ಜೀವನದಲ್ಲಿ ಏಳಿಗೆ ಸಾಧ್ಯ

15Raibag1
Published on

ರಾಯಬಾಗ: ಯುವಕರು ಯೋಗ, ಧ್ಯಾನ ಮತ್ತು ದೈಹಿಕ ಪರಿಶ್ರಮದಿಂದ ಒಳ್ಳೆಯ ಆರೋಗ್ಯ ಹೊಂದಬೇಕು ಎಂದು ಹಾರೂಗೇರಿ ಎಸ್‌ಪಿಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಕೆ.ಬಿ.ಸ್ವಾತಿ ಹೇಳಿದರು.

ಪಟ್ಟಣದ ಎಸ್‌ಪಿಎಂ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ, ಎಂ.ಕಾಂಮತ್ತು ಎಂಎ (ರಾಜ್ಯಶಾಸ್ತ್ರ) ಸ್ನಾತಕೋತ್ತರ ವಿಭಾಗ ಹಾಗೂ ದೈಹಿಕ ಶಿಕ್ಷಣ (ಬಿಪಿಎಡ್ ಮತ್ತು ಎಂಪಿಎಡ್) ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಏಕಾಗ್ರತೆ, ನಿಸ್ವಾರ್ಥ ಸೇವೆ, ಶಿಸ್ತು, ಸ್ವಯಂಗೌರವ, ಸಮಯ ಪಾಲನೆ, ಜ್ಞಾನಾರ್ಜನೆ, ಗುರಿ ಮತ್ತು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಿಸ್ವಾರ್ಥ ಸೇವೆಯ ಅಭಾಜಿಯವರು ಕಟ್ಟಿದ ಈ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಮೂಡಿಸಿದೆ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ, ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ, ಪ್ರಾಚಾರ್ಯರಾದ ಎಸ್.ಎಸ್.ಕುರಬೇಟಿ, ಡಾ.ಆರ್.ಕೆ.ಪಾಟೀಲ, ಐ.ಎಸ್.ಗೋಕಾಕ ಹಾಗೂ ಉಪನ್ಯಾಸಕ ಪಿ.ಕೆ.ಶೆಟ್ಟಿ, ಎಸ್.ಬಿ.ಮರಲಿಂಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net