

ಬ್ಯಾಡಗಿ: ದೇಶದ್ರೋಹಿ ಹೇಳಿಕೆ ನೀಡದಂತೆ ಇನ್ನಷ್ಟು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹಿಂದುಪರ ಸಂಘಟನೆಗಳು, ನ್ಯಾಯವಾದಿಗಳ ಸಂಘ ಹಾಗೂ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ದೇಶದ ಅನ್ನ ತಿಂದು, ಇಲ್ಲಿಂದಲೇ ಎಲ್ಲ ಪಡೆದು ದೇಶದ ಭದ್ರತೆ ಹಾಗೂ ದೇಶದ ಘನತೆಗೆ ಧಕ್ಕೆ ತರುವ ವಿದ್ರೋಹಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಂತಹ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನಿನ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಉಪತಹಸೀಲ್ದಾರ್ ಜಿ.ಸಿ. ಕಟ್ಟಿಮನಿ ಮನವಿ ಸ್ವೀಕರಿಸಿದರು. ಪುರಸಭೆ ಸದಸ್ಯ ಈರಣ್ಣ ಬಣಕಾರ, ಮೆಹಬೂಬ್ ಅಗಸನಹಳ್ಳಿ ಶಿವಯೋಗಿ ಅಂಗಡಿ, ಹಿಂದುಪರ ಸಂಘಟನೆಯ ವಿಜಯಭರತ ಬಳ್ಳಾರಿ, ವಿಷ್ಣುಕಾಂತ ಬೆನ್ನೂರು, ವೀರೇಶ ಮತ್ತಿಹಳ್ಳಿ, ನಾಗರಾಜ ಹಾವನೂರು, ಸಂಜೀವ ಮಡಿವಾಳರ, ನಂದೀಶ ವೀರನಗೌಡ್ರ, ಮಂಜುನಾಥ ಪೂಜಾರ, ಶಿವಯೋಗಿ ಗಡಾದ, ಕಿರಣ ಗಡಿಗೋಳ, ಸುರೇಶ ಅಸಾದಿ, ವೀರೇಂದ್ರ ಶೆಟ್ಟರ, ಸುರೇಶ ಚಲವಾದಿ, ಅರುಣಕುಮಾರ ಪಾಟೀಲ, ಹೊನ್ನಪ್ಪ ಡಿ, ಭಾರತಿ ಕುಲಕರ್ಣಿ ಇತರರಿದ್ದರು.