ಕಟ್ಟುನಿಟ್ಟಾಗಿ ಹಾಜರಾತಿ ನಿಯಮ ಪಾಲಿಸಿ

ctd---tp..
filter: 0; fileterIntensity: 0.000000; filterMask: 0; captureOrientation: 0; hdrForward: 0; shaking: 0.009634; highlight: 1; algolist: 0; multi-frame: 1; brp_mask: 8; brp_del_th: 0.0011,0.0005; brp_del_sen: 0.1000,0.1000; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;
Published on

ಚಿತ್ರದುರ್ಗ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ 2 ಬಾರಿ ಎನ್‌ಎಂಎಂಎಸ್ ಆ್ಯಪ್ ಮೂಲಕ ನಮೂದಿಸಬೇಕು, ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಉಪಕಾರ್ಯದರ್ಶಿ ಕೆ. ತಿಮ್ಮಪ್ಪ ಹೇಳಿದರು.

ಚಿತ್ರದುರ್ಗ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಹಿರಿಯೂರು, ಚಿತ್ರದುರ್ಗ ತಾಲೂಕುಗಳ ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ ನಾಡಿದರು.

ಕಾರ್ಮಿಕರ ಹಾಜರಾತಿಯನ್ನು ಆ್ಯಪ್ ಮೂಲಕ ತೆಗೆದುಕೊಳ್ಳಬೇಕು. ಇದನ್ನು ನಿರ್ಲಕ್ಷಿೃಸಿದರೆ ಗ್ರಾಮ ಕಾಯಕ ಮಿತ್ರ ಮತ್ತು ಬಿಎಫ್‌ಟಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ನಿಯಮ ಮೀರಿ ನಮೂದಿಸುವಂತೆ ಒತ್ತಡ ಬಂದರೆ ತಾಪಂ ಇಒಗಳಿಗೆ ಮಾಹಿತಿ ನೀಡಬೇಕು. ನರೇಗಾದ ಕೆಲಸಗಳಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತಪ್ಪಿತಸ್ಥ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡುವುದಾಗಿ ಎಚ್ಚರಿಸಿದರು. ಸೋಷಿಯಲ್ ಆಡಿಟ್ ಆಕ್ಷೇಪಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಹಿರಿಯೂರು ತಾಪಂ ಇಒ ಸತೀಶ್‌ಕುಮಾರ್ ಮಾತನಾಡಿ, ನರೇಗಾ ಅನುಷ್ಠಾನದ ಪಾರದರ್ಶಕತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದರು.

ಚಿತ್ರದುರ್ಗ ತಾಪಂ ಇಒ ರವಿಕುಮಾರ್ ಮಾತನಾಡಿ,ನರೇಗಾಕ್ಕೆ ಸಂಬಂಧಿಸಿದಂತೆ ಎರಡು ತಿಂಗಳಿಗೆ ಒಮ್ಮೆ ಸಾಮಗ್ರಿ ಹಣ ಪಾವತಿ ಆಗುತ್ತಿದ್ದು, ಕಾಮಗಾರಿಗಳ ಮುಕ್ತಾಯದ ಪ್ರಗತಿ ಶೇ.100 ಸಾಧನೆಯಾಗಬೇಕೆಂದರು. ಜಿಪಂ ಕಚೇರಿಯ ಮೋಹನ್,ಸಹಾಯಕ ನಿರ್ದೇಶಕ ಎಚ್.ಯರ‌್ರಿಸ್ವಾಮಿ,ಕೆ.ಶಿವಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net