ಕಟ್ಟಡ ಸಾಮಾಗ್ರಿಗಳ ನಿರ್ಮಾಣ 2024 ಆರಂಭ

13 YERRISWAMY 11
Published on

ಬಳ್ಳಾರಿ : ಇಲ್ಲಿನ ಕಮ್ಮ ಭವನದಲ್ಲಿ ಸರ್.ಎಂ.ವಿಶೇಶ್ವರಯ್ಯನವರ 164 ನೇ ಜನ್ಮ ದಿನಾಚರಣೆ ಅಂಗವಾಗಿ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್‌ ಆ್ಯಂಡ್ ಆರ್ಕಿಟೆಕ್ಟ್ಸ್ ವತಿಯಿಂದ ನಿರ್ಮಾಣ 2024 ಪ್ರದರ್ಶನ ಹಾಗೂ ಮಾರಾಟ ಮೇಳ ಶುಕ್ರವಾರ ಆರಂಭವಾಯಿತು.
ಮೇಳಕ್ಕೆ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಚಾಲನೆ ನೀಡಿ ಮಾತನಾಡಿದರು. ಕಟ್ಟಡದ ಹೊಸ ಸಾಮಾಗ್ರಿ, ತಂತ್ರಜ್ಞಾನದ ಬಗ್ಗೆ ತಿಳಿಸುವ ಈ ಪ್ರದರ್ಶನ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಅಸೋಸಿಯೇಷನ್ ಬಡ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ಮೆಚ್ಚದ ಮನೆಗಳ ನಿರ್ಮಾಣಕ್ಕೆ ಮುಂದಾಗಿ ಜಿಲ್ಲಾಡಳಿತವೂ ಅದಕ್ಕೆ ಸಹಕಾರ ನೀಡಲಿದೆ ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಈ ಜಿಲ್ಲೆಯಲ್ಲಿ ದ್ವಿತೀಯ ಪಿಯುನಲ್ಲಿ ವಿಜ್ಞಾನ ಅಭ್ಯಾಸ ಮಾಡುವುದು ಕಡಿಮೆ ಇದೆ. ಉತ್ತಮ ಎಂಜಿನಯರ್‌ಗಳಾಗಲು ವಿಜ್ಞಾನದ ಅಭ್ಯಾಸಬೇಕು. ಉತ್ತಮ ತಂತ್ರಜ್ಞಾನದೊಂದಿಗೆ ಕಟ್ಟಡಗಳ ನಿರ್ಮಾಣ ನಿಮ್ಮಿಂದ ಆಗಲಿ ಎಂದರು.
ಅಸೋಸಿಯೇಷನ್ ಅಧ್ಯಕ್ಷ ಹೊಸೂರ ಈಶ್ವರಗೌಡ, ಮಾಜಿ ಅಧ್ಯಕ್ಷ ಸಂಜೀವ ಪ್ರಸಾದ ಮಾತನಾಡಿದರು.
ಪ್ರದರ್ಶನ : ಪ್ರದರ್ಶನದಲ್ಲಿ 60 ಸ್ಟಾಲ್ ಗಳಲ್ಲಿ ವಿವಿಧ ರೀತಿಯ ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ನಗರದಲ್ಲಿ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಈ ಕೆಲಸ ಮಾಡುತ್ತಿದೆ ಎಂದು ಜನರು ಅಭಿಪ್ರಾಯ ಪಟ್ಟರು. ಶುಕ್ರವಾರ ದಿಂದ ಭಾನುವಾರದವರೆಗೆ ಒಟ್ಟು ಮೂರು ದಿನ ಮೇಳ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net