

ಚಿಕ್ಕಮಗಳೂರು: ಜಿಲ್ಲಾ ಸಿವಿಲ್ ಇಂಜಿನಿಯರ್ ಸಂಘ ಮತ್ತು ಯು.ಎಸ್. ಕಮ್ಯೂನಿಕೇಷನ್ ಆಶ್ರಯದಲ್ಲಿ ಮೂರು ದಿನಗಳು ನಡೆಯಲಿರುವ ರಾಷ್ಟಿçÃಯ ಹಾಗೂ ಅಂತರಾಷ್ಟಿçÃಯ ಮಟ್ಟದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೃಹತ್ ವಸ್ತು ಪ್ರದರ್ಶನ ಶುಕ್ರವಾರ ಆರಂಭವಾಯಿತು.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯುತ್ತಿರುವ ಈ ವಸ್ತು ಪ್ರದರ್ಶನವನ್ನು ನಗರದ ವಾಟರ್‌ಜೆಟ್ ಇಂಜಿನಿರ‍್ಸ್ ಮಾಲೀಕರಾದ ಹಿರಿಯ ಇಂಜಿನಿಯರ್ ಡಿ.ಎಚ್. ನಟರಾಜ್ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಚ್. ನಟರಾಜ್, ಇತ್ತೀಚಿನ ದಿನಗಳಲ್ಲಿ ಮನೆ ಮತ್ತು ಕಟ್ಟಡ ನಿರ್ಮಾಣದ ಹೊಸ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನ ಬೆಳೆಯುತ್ತಿವೆ. ಹೊಸ ತಂತ್ರಜ್ಞಾನದ ಪರಿಕರಗಳನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿರ‍್ಸ್ ಸಂಘ ನಗರದಲ್ಲಿ ವಸ್ತು ಪ್ರದರ್ಶನದ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದರು.
ಹೊಸ ಮನೆ ಮತ್ತು ಕಟ್ಟಡ ನಿರ್ಮಾಣದ ಕನಸ್ಸು ಹೊತ್ತಿರುವ ಸಾರ್ವಜನಿಕರಿಗೆ ಇಂಜಿನಿಯರಿAಗ್ ವಸ್ತು ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದು ಸಂತೋಷದ ಸಂಗತಿ. ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ನಡೆಯುತ್ತಿದ್ದ ಇಂತಹ ವಸ್ತು ಪ್ರದರ್ಶನಗಳನ್ನು ಜಿಲ್ಲಾ ಮಟ್ಟದಲ್ಲಿ ನಡೆಸುವ ಮೂಲಕ ಸಿವಿಲ್ ಇಂಜಿನಿಯರ್ ಸಂಘ ಉತ್ತಮ ಕೆಲಸ ಮಾಡಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಜೀವನದಲ್ಲಿ ಒಂದು ಮನೆ ನಿರ್ಮಾಣ ಮಾಡಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅವರು ಮನೆ ನಿರ್ಮಾಣ ಮಾಡಲು ಉತ್ತಮ ಗುಣಮಟ್ಟ ಹಾಗೂ ಹೊಸ ತಂತ್ರಜ್ಞಾನದ ಪರಿಕರಗಳನ್ನು ಬಳಸಲು ಈ ವಸ್ತು ಪ್ರದರ್ಶನ ಪೂರಕವಾಗಿದೆ. ಚಿಕ್ಕಮಗಳೂರು ನಗರದಲ್ಲಿ ಈ ವಸ್ತು ಪ್ರದರ್ಶನವನ್ನು ಸಂಘಟಿಸಿರುವ ಸಿವಿಲ್ ಇಂಜಿನಿಯರ್ ಸಂಘ ಉತ್ತಮ ಕೆಲಸ ಮಾಡಿದೆ ಎಂದರು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಟ್ಟಡ ಹಾಗೂ ಮನೆ ನಿರ್ಮಾಣ ಮಾಡುವ ಜನರಿಗೆ ಈ ವಸ್ತು ಪ್ರದರ್ಶನ ಅತ್ಯಂತ ಸಹಕಾರಿಯಾಗಿದ್ದು, ಈ ವಸ್ತು ಪ್ರದರ್ಶನವನ್ನು ನಗರದಲ್ಲಿ ಹಮ್ಮಿಕೊಳ್ಳುವ ಮೂಲಕ ಜಿಲ್ಲಾ ಸಿವಿಲ್ ಇಂಜಿನಿಯರ್ ಸಂಘ ಸಾರ್ವಜನಿಕರಿಗೆ ಸಹಾಯ ಮಾಡಿದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ ನನ್ನ ತಂದೆಯವರೂ ಕೂಡ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದರು. ಸಾರ್ವಜನಿಕ ಸೇವಾ ಕಾರ್ಯಕ್ಕೆ ಸಿವಿಲ್ ಇಂಜಿನಿಯರಿAಗ್ ಸಂಘ ಹಮ್ಮಿಕೊಳ್ಳುವ ಎಲ್ಲ ರೀತಿಯ ಕೆಲಸ ಕಾರ್ಯಗಳಿಗೆ ಜಿಲ್ಲಾ ಒಕ್ಕಲಿಗರ ಸಂಘ ಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್, ಕೋ-ಆರ್ಡಿನೇಟರ್ ಕೆ.ಜಿ. ವೆಂಕಟೇಶ್, ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್, ಕಾರ್ಯದರ್ಶಿ ಗೋಪಿಕೃಷ್ಣ, ಜಯಬಸವಾನಂದ ಸ್ವಾಮೀಜಿ, ಸಿವಿಲ್ ಇಂಜಿನಿಯರಿAಗ್ ಸಂಘದ ಉಪಾಧ್ಯಕ್ಷ, ಕಾರ್ಯದರ್ಶಿ ರಾಜೇಗೌಡ, ಟಿ. ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸಿ.ಪಿ. ಸುರೇಶ್ ಉಪಸ್ಥಿತರಿದ್ದರು.