ಕಜಾಪದಿಂದ ಭತ್ತದ ಕೊಯ್ಲು!

kls paddy
ಕಳಸ ಎಡದಾಳು ಪ್ರತಿಮಾ ಶೆಟ್ಟಿ ಅವರ ಗದ್ದೆಯಲ್ಲಿ ಭತ್ತದ ಕೊಯ್ಲು ಮಾಡುವುದರ ಮುಖಾಂತರ ರೈತ ದಿನವನ್ನು ಕನ್ನಡ ಜಾನಪದ ಪರಿಷತ್ ಸದಸ್ಯರು ಆಚರಿಸಿದರು. ಸುಜಯಾ ಸದಾನಂದ, ವಿನಾಯಕ, ಭರತ್‌ರಾಜ್, ಶರ್ೀ, ಕಲ್ಪನಾ, ಆಶಾ ಇತರರಿದ್ದರು.
Published on

ಕಳಸ: ಕಳಸ ಎಡದಾಳು ಪ್ರತಿಮಾ ಶೆಟ್ಟಿ ಅವರ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವುದರ ಮುಖಾಂತರ ರೈತ ದಿನವನ್ನು ಕನ್ನಡ ಜಾನಪದ ಪರಿಷತ್ ಸದಸ್ಯರು ಆಚರಿಸಿದರು.

ಕೆೆಲ ದಿನಗಳ ಹಿಂದೆ ಸುರಿದ ಅಕಾಲಿ ಮಳೆಯಿಂದ ರೈತರು ಭತ್ತದ ಕೊಯ್ಲು ಸ್ಥಗಿತಗೊಳಿಸಿದ್ದರು. ಈಗ ಪುನಃ ಬಿಸಿಲಿನ ವಾತಾವರಣವಿರುವುದರಿಂದ ತಾಲೂಕಿನ ಎಲ್ಲೆಡೆ ಭತ್ತದ ಕೊಯ್ಲು ಪ್ರಾರಂಭವಾಗಿದೆ. ಒಂದೆಡೆ ಭತ್ತದ ಕೊಯ್ಲು ಮಾಡಲು ಕಾರ್ಮಿಕರ ಕೊರತೆ ಇದ್ದು, ಕಟಾವು ಯಂತ್ರಗಳಿಂದ ಭತ್ತದ ಕಟಾವು ಮಾಡುತ್ತಿದ್ದಾರೆ. ಆದರೆ ಕಳಸ ಕನ್ನಡ ಜಾನಪದ ಸದಸ್ಯರು ಪರಿಷತ್ತಿನ ಸದಸ್ಯೆಯ ಮನೆಯ ಭತ್ತದ ಗದ್ದೆಯಲ್ಲಿ ಗದ್ದೆಗಿಳಿದು ಭತ್ತದ ಕೊಯ್ಲು ಮಾಡಿದರು.

ಈ ಕುರಿತು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ, ಅದೆಷ್ಟೋ ಜಾನಪದ ಹಾಡುಗಳು ಇಂಥ ಗದ್ದೆಯಲ್ಲಿ ಹುಟ್ಟಿಕೊಂಡಿವೆ. ಅಂಥ ಹಾಡುಗಳೆಲ್ಲ ಯಾಂತ್ರೀಕೃತ ಬದುಕಿನಲ್ಲಿ ಮರೆಯಾಗುವುದಲ್ಲದೆ ತೋಟಗಾರಿಕಾ ಬೆಳೆ ಹಾಗೂ ಕಾರ್ಮಿಕರ ಸಮಸ್ಯೆ, ಪ್ರಾಣಿಗಳ ಕಾಟ ಇವೆಲ್ಲ ಕಾರಣದಿಂದ ಭತ್ತ ಬೆಳೆಯೂ ನಶಿಸುತ್ತಿದೆ. ಗದ್ದೆಗಿಳಿದು ಭತ್ತ ಕೊಯ್ಲು ಮಾಡುವುದರಲ್ಲಿ ಸಾಕಷ್ಟು ಜಾನಪದ ಸಂಸ್ಕೃತಿ ಅಡಗಿದೆ. ಇದು ಕೂಡ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದರು.

ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸುಜಯಾ ಸದಾನಂದ, ಸದಸ್ಯರಾದ ವಿನಾಯಕ, ಭರತ್‌ರಾಜ್, ಶರ್ೀ, ಕಲ್ಪನಾ ಅಜಿತ್, ಪ್ರೇಮ್‌ಕುಮಾರ್, ಅಮಿತಾ ವಿನಾಯಕ್, ಆಶಾ ಗುರು ಶೇಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net