ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಮಹಿಳೆ

312448_1_En_19_Fig2_HTML
Published on

ಭಾಲ್ಕಿ: ತಳವಾಡ (ಎಂ) ಗ್ರಾಮದ ರೈತ ಮಹಿಳೆ ಶೀಲಾಬಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲಿಗೆ ಕಚ್ಚಿದ ಹಾವನ್ನು ಕೊಂದು ಆಸ್ಪತ್ರೆಗೆ ತಂದಿದ್ದಾರೆ. ಹಾವು ಕಾಲಿಗೆ ಕಡಿದ ತಕ್ಷಣ ಅದನ್ನು ಹಿಡಿದ ಅವರು, ಕೊಂದು ಬೆಂಕಿ ಹಚ್ಚಿ ಕಳೆಬರದೊಂದಿಗೆ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ವೈದ್ಯರಿಗೆ ಚಿಕಿತ್ಸೆ ನೀಡುವಾಗ ಯಾವ ಹಾವು ಕಡಿದಿದೆ ಎಂಬುದನ್ನು ತೋರಿಸಲು ತಂದಿದ್ದೇನೆ. ಯಾವ ಹಾವು ಕಡಿದಿದೆ ಎಂಬುದನ್ನು ನೋಡಿ, ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಆದ್ದರಿಂದ ಹಾವನ್ನು ತೆಗೆದುಕೊಂಡು ಬಂದಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net