ಕಚೇರಿಗೆ ಬರದಿದ್ರೂ ಎ್​ಸಿ ಡಿಎಲ್​!

18 12
Published on

ತುಮಕೂರು ಆರ್​ಟಿಒದಲ್ಲಿ ಲೋಕಾ ದಾಳಿ, ಐವರು ಅಧಿಕಾರಿ&ಸಿಬ್ಬಂದಿ ವಿರುದ್ಧ ವರದಿ ಸಲ್ಲಿಕೆ

ಬೆಂಗಳೂರು: ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಒ) ಮೇಲಿನ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಹಲವು ಹಗರಣಗಳು ಬೆಳಕಿಗೆ ಬಂದಿವೆ. ನಕಲಿ "ಬೋನೈಡ್​ ಸರ್ಟಿಫಿಕೇಟ್​'ಗಳಿಗೆ ಟ್ರಾ$್ಯಕ್ಟರ್​ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವುದು ಒಂದೆಡೆಯಾದರೆ ಬ್ರೇಕ್​ ಇನ್​ಸ್ಪೆಕ್ಟರ್​ ರಜೆಯಲ್ಲಿದ್ದು ಕಚೇರಿಗೆ ಬರದಿದ್ದರು ಕೂಡ ಅವರ ಲಾಗಿನ್​ ಐಡಿಯಲ್ಲಿ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೇಟ್​ (ಎ್​ಸಿ) ಮತ್ತು ಡೆವಿಂಗ್​ ಲೈಸೆನ್ಸ್​ (ಡಿಎಲ್​)ಗೆ

ಅನುಮೋದನೆ ಸಿಕ್ಕಿರುವ ವಿಚಾರ ಬೆಳಕಿಗೆ ಬಂದಿದೆ.

ಬೋನೈಡ್​ ಹಗರಣದ ಸಂಬಂಧ ತುಮಕೂರು ಆರ್​ಟಿಒದ ನಿವೃತ್ತ ಆರ್​ಟಿಒ, ಸೂಪರಿಂಟೆಂಡೆಂಟ್​, ಕೇಸ್​ ವರ್ಕರ್​ ಹಾಗೂ ಮಧ್ಯವರ್ತಿ ಸೇರಿ ಐವರ ಹೆಸರುಗಳನ್ನು ಉಲ್ಲೇಖಿಸಿ ಲೋಕಾಯುಕ್ತ ಪೊಲೀಸರು ಪ್ರಧಾನ ಕಚೇರಿಗೆ ಮಹಜರು ವರದಿ ಸಲ್ಲಿಸಿದ್ದಾರೆ. ನ.27ರಂದು ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಎರಡು ವರ್ಷದಲ್ಲಿ ಬರೋಬ್ಬರಿ 6 ಸಾವಿರಕ್ಕೂ ಅಧಿಕ ಟ್ರಾ$್ಯಕ್ಟರ್​ಗಳು ರಿಜಿಸ್ಟ್ರೆಷನ್​ ಆಗಿರುವುದು ಬಹಿರಂಗವಾಗಿದ್ದು, ನೋಂದಣಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಜಪ್ತಿ ಮಾಡಿಕೊಂಡು ಹೋಗಿದೆ. ಟ್ರಾ$್ಯಕ್ಟರ್​ ಹಾಗೂ ಟ್ರಾಲಿಗಳ ನೋಂದಣಿಗೆ ಸಂಬಂಧಿಸಿದಂತೆ 2500ಕ್ಕೂ ಅಧಿಕ ಕಡತಗಳೇ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಹಿರಿಯ ಮೋಟಾರು ವಾಹನ ನಿರೀಕರೊಬ್ಬರು ಕೋರ್ಟ್​ ಕೆಲಸಕ್ಕೆ ಹೋಗಿದ್ದ ವೇಳೆ ಹಾಗೂ ರಜೆಯಲ್ಲಿದ್ದಾಗಲೂ ಅವರ ಲಾಗಿನ್​ ಐಡಿಯಲ್ಲಿ ಎ್​ಸಿ ಮತ್ತು ಡಿಎಲ್​ ಅಪ್ರೂವ್​ ಆಗಿದೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳು, ಸಂಬಂಧಿತ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಕೋರ್ಟ್​ ಕರ್ತವ್ಯ ಮುಗಿಸಿಕೊಂಡು ಬಂದು ಅಪ್ರೂವ್​ ಮಾಡಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಕೋರ್ಟ್​ ಕರ್ತವ್ಯದ ಹಾಜರಿ (ಅಟೆಂಡೆನ್ಸ್​) ದಾಖಲಾತಿಗಳಲ್ಲಿ ಟೈಂ ಸಮೇತ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಲಾಗಿನ್​ ಐಡಿಯಲ್ಲಿ ಅಪ್ರೂವ್​ ಆಗಿರುವ ಸಮಯದಲ್ಲಿ ಸಂಬಂಧಿತ ಬ್ರೇಕ್​ ಇನ್​ಸ್ಪೆಕ್ಟರ್​ ಕೋರ್ಟ್​ನಲ್ಲಿದ್ದರು ಎಂಬುದು ದೃಢವಾಗಿದೆ. ಅಲ್ಲದೆ

ರಜೆಯಲ್ಲಿದ್ದ ದಿನವೂ ಅವರು ಎ್​ಸಿ, ಡಿಎಲ್​ ಕೊಟ್ಟಿರುವದು ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

ಅನುಮತಿ ಸಿಕ್ಕ ತಣ ಎ್​ಐಆರ್​: ಬೋನೈಡ್​ ದಂಧೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಸಿಕ್ಕ ಕೂಡಲೇ ಲೋಕಾಯುಕ್ತ ಪೊಲೀಸರು ಎ್​ಐಆರ್​ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದ್ದಾರೆ. ಕೋಲಾರ ಹಾಗೂ ರಾಮನಗರ ಆರ್​ಟಿಒದಲ್ಲಿ ನಡೆದಿರುವ ಬೋನೈಡ್​ ದಂಧೆ ಸಂಬಂಧ ಎ್​ಐಆರ್​ ದಾಖಲಾಗಿ, ನಿವೃತ್ತ ಆರ್​ಟಿಒ, ಸೂಪರಿಂಟೆಂಡೆಂಟ್​ ಮತ್ತು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.

ಬ್ರೇಕ್​ ಇನ್​ಸ್ಪೆಕ್ಟರ್​ ಮೇಲೆ ಈ ಹಿಂದೆಯೇ ದೂರು: ಈಗ ಆರೋಪ ಕೇಳಿಬಂದಿರುವ ಸೀನಿಯರ್​ ಬ್ರೇಕ್​ ಇನ್​ಸ್ಪೆಕ್ಟರ್​ ವಿರುದ್ಧ ಈ ಹಿಂದೆಯೇ ತುಮಕೂರು ನಗರ ಲಾರಿ ಮಾಲೀಕರ ಸಂ ಸಾರಿಗೆ ಆಯುಕ್ತರಿಗೆ ದೂರು ಕೊಟ್ಟಿದ್ದರು. ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಕಚೇರಿಯ ಹೊರಗಡೆ ವಾಣಿಜ್ಯ ವಾಹನಗಳಿಗೆ ಎ್​ಸಿ ಮಾಡಿಕೊಡುತ್ತಿರುವುದಾಗಿ ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net