ಕಚೇರಿಗೆ ಅಲೆದಾಡಿಸಬೇಡಿ

KDR dc visit
ಸಖರಾಯಪಟ್ಟಣದ ನಾಡಕಚೇರಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿದ್ದರು. ಎಡಿಸಿ ನಾರಾಯಣ ಕನಕ ರಡ್ಡಿ, ಜಿತೇಂದ್ರ ಇತರರಿದ್ದರು.
Published on

ಕಡೂರು: ಕಚೇರಿಗೆ ಬರುವ ಸಾರ್ವಜನಿಕರನ್ನು ಸತಾಯಿಸದೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಸಖರಾಯಪಟ್ಟಣ ನಾಡಕಚೇರಿಗೆ ಗುರುವಾರ ಭೇಟಿ ನೀಡಿ ಮಾತನಾಡಿ, ರೈತರು ಕೆಲಸಗಳಿಗೆ ಬಹಳ ದೂರದಿಂದ ಬರುತ್ತಾರೆ. ಅವರ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿಕೊಡಿ. ಯಾರನ್ನೂ ಅಲೆದಾಡಿಸಬೇಡಿ. ಕಂದಾಯ ಇಲಾಖೆ ವಿರುದ್ಧ ಸಾರ್ವಜನಿಕರು ಬಹಳಷ್ಟು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅದನ್ನು ದೂರ ಮಾಡುವ ನಿಟ್ಟಿನಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿ ಎಂದರು.

ಎಡಿಸಿ ನಾರಾಯಣ ಕನಕ ರಡ್ಡಿ ಮಾತನಾಡಿ, ಸಖರಾಯಪಟ್ಟಣ ದೊಡ್ಡ ಹೋಬಳಿ. ಕಂದಾಯ ಇಲಾಖೆ ಕೆಲಸಗಳೇ ಹೆಚ್ಚಿವೆ. ಸಮಯಕ್ಕೆ ಸರಿಯಾಗಿ ಬಂದು ಕೆಲಸ ನಿರ್ವಹಿಸಿ. ಯಾವುದೇ ಲೋಪಗಳು ಎದುರಾಗದಂತೆ ಎಚ್ಚರಿಕೆವಹಿಸಿ ಎಂದು ತಿಳಿಸಿದರು.

ಉಪತಹಸೀಲ್ದಾರ್ ಲೋಕೇಶ್ ನಾಯ್ಕ, ಕಂದಾಯ ನಿರೀಕ್ಷಕ ಜಿತೇಂದ್ರ ನಾಯ್ಕ ಮತ್ತು ಗ್ರಾಮಲೆಕ್ಕಿಗರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net