

ಕಂಪ್ಲಿ: ಪಟ್ಟಣದ ಅತಿಥಿಗೃಹ ಆವರಣದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿ ಹಾಗೂ ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ಸಹಯೋಗದಲ್ಲಿ ಗುರುವಾರ ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು.
ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ಐ.ಹೊನ್ನೂರ್‌ಸಾಬ್ ಮಾತನಾಡಿ, 20 ಕಾರ್ಮಿಕರ ಮಕ್ಕಳ ಮದುವೆ ಸಹಾಯ ಧನ, ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚ ಬಾಕಿ ಇದ್ದು, ಕಾರ್ಮಿಕ ಸಚಿವರು ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪುರಸಭೆ ಸದಸ್ಯ ಕೆ.ಎಸ್.ಚಾಂದ್‌ಬಾಷ ಮಾತನಾಡಿ, ಕಾರ್ಮಿಕರನ್ನು ಕಚೇರಿಗೆ ಅಲೆಸದೆ ಅವರಿಗೆ ಕೊಡಬೇಕಾದ ಸೌಲಭ್ಯ, ಪರಿಹಾರ ಧನವನ್ನು ಕೂಡಲೇ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಜಾರ ಹಮಾಲಿ ಕಾರ್ಮಿಕ ಡಿ.ಮುನಿಸ್ವಾಮಿ ಮಾತನಾಡಿ, ಯಾವುದೇ ವಲಯಗಳ ಕಾರ್ಮಿಕರಿಗೆ ಎಂಟು ತಾಸಿಗಿಂತ ಹೆಚ್ಚಿನ ಅವಧಿ ದುಡಿಸಿಕೊಳ್ಳುವುದು ಸರಿಯಲ್ಲ. ಎಂಟು ತಾಸಿಗಿಂತ ಹೆಚ್ಚಿನ ದುಡಿಮೆ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಎಂಟು ತಾಸಿನ ದುಡಿಮೆಗೆ ಸೀಮಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಜೆಸಿಐ ಸೋನಾ ಪದಾಧಿಕಾರಿಗಳಾದ ಡಿ.ಮಂಜೇಶ್, ಇಮ್ತಿಯಾಜ್, ಅಕ್ಕಿ ಜಿಲಾನ್, ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಮನೋಜ್‌ಕುಮಾರ್, ಫೆಡರೇಷನ್ ಪದಾಧಿಕಾರಿಗಳಾದ ಆರ್.ನಾಗರಾಜ, ಗಂಗಣ್ಣ, ಲಕ್ಷ್ಮಣ, ಉಮೇಶ್, ಮೆಹಬೂಬ್, ಜಿ.ನಾಗರಾಜ, ಮೆಹಬೂಬ್ ಬಾಷ, ಭೀಮಲಿಂಗ, ಗೋವಿಂದ, ಪ್ರಮುಖರಾದ ಜಿ.ಸುಧಾಕರ ಶ್ರೀನಿವಾಸ್ ಇತರರಿದ್ದರು.