ಕಚೇರಿ ಸ್ಥಳಾಂತರಕ್ಕೆ ಅಸಮಾಧಾನ

31-kolar-3 Raitha sangha
ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಇತರರು ಇದ್ದರು.
Published on

ಕೋಲಾರ : ಪಾರಂಪರಿಕ ಕಟ್ಟಡವಾಗಿರುವ ನಗರದ ಸಹಾಯಕ ಕಮಿಷನರ್ ಕಚೇರಿ ಕಟ್ಟಡವು ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಭವನಕ್ಕೆ ಕಚೇರಿ ಸ್ಥಳಾಂತರ ಮಾಡಬಾರದು. ಟೊಮ್ಯಾಟೊಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಸಂಘ ಸದಸ್ಯರು ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಅವರಿಗೆ ನಗರದ ಶಾಸಕರ ಕಚೇರಿಯಲ್ಲಿ ಮನವಿ ನೀಡಿ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನಗರದ ಮಧ್ಯಭಾಗದಲ್ಲಿ ಸಹಾಯಕ ಕಮಿಷನರ್ ಕಚೇರಿ ಇದ್ದು, ಕಟ್ಟಡ ದುರಸ್ತಿ ನೆಪದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡಿ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ವಸತಿ ಕಟ್ಟಡ ಕಟ್ಟುವ ನಿರ್ದಾರ ಜನ ವಿರೋಧಿ ದೋರಣೆಯಾಗಿದೆ. ಇದರಿಮದ ಈ ಕೂಡಲೇ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದರೂ, ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಬಿಂಗಿ ರೋಗಕ್ಕೆ ತುತ್ತಾಗಿ ನಾಶವಾಗಿ ರೈತರು ನಷ್ಟಹೊಂದುವಂತಾಗಿದೆ. ಆದರೆ ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ೩೮೦೦ ಕಂಪೆನಿಗಳು ೪೮೦ ಜನ ಮಾರಾಟಗಾರರು ೧೨೦೦ ಅಂಗಡಿಗಳಿದ್ದರೂ ಗುಣಮಟ್ಟದ ಕೀಟನಾಶಕ ಮಾರಾಟ ಮಾಡುತ್ತಿಲ್ಲ. ನಕಲಿ ಕೀಟನಾಶಕಗಳನ್ನು ಕಂಪೆನಿಗಳು ನೇರವಾಗಿ ರಾತ್ರಿವೇಳೆ ರೈತರಿಗೆ ಮಾರಾಟ ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು ಕುಮಕ್ಕು ನೀಡುತ್ತಿದ್ದಾರೆ. ಹೀಗಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ನಗರದಿಂದ ೬ಕಿಮೀ ದೂರದಲ್ಲಿ ಜಿಲ್ಲಾಡಳಿತ ಭವನವಿದ್ದು, ಸಹಾಯಕ ಕಮಿಷನರ್ ಕಚೇರಿ ಸ್ಥಳಾಂತರ ಮಾಡುವ ಬದಲು ಶಿಥಿಲಗೊಂಡಿದ್ದರೆ ಸರ್ಕಾರಕ್ಕೆ ವರದಿ ನೀಡಿ ಅಭಿವೃದ್ಧಿಪಡಿಸಬಹುದಿತ್ತು. ಅದನ್ನು ಬಿಟ್ಟು ಈ ರೀತಿಯ ನಿರ್ದಾರ ಸರಿಯಲ್ಲ, ಇದನ್ನು ಕೈ ಬಿಡಬೇಕು ಇಲ್ಲವಾದರೆ ಆ.೧೪ ರಂದು ರಾತ್ರಿ ೧೨ ಗಂಟೆಗೆ ನ್ಯಾಯಕ್ಕಾಗಿ ಸ್ವಾಂತತ್ರö್ಯ ದಿನಾಚರಣೆಯಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್.ಸಿ ಅನಿಲ್‌ಕುಮಾರ್, ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ
ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ಗೀರಿಶ್, ತರ‍್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಗೌಡ, ವಿ.ನಳಿನಿ, ಹರೀಶ್, ವೀಣಾ, ನರಸಿಂಹಪ್ಪ, ವೆಂಕಟೇಶಪ್ಪ, ಯಲ್ಲಪ್ಪ, ಸುಪ್ರೀಂ ಚಲ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net