ಕಚುಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಂಜುಳಾ

h9-Manjula Namadev
Published on

ಹುಬ್ಬಳ್ಳಿ : ಕಚುಸಾಪ ಅಖಂಡ ಧಾರವಾಡ ಜಿಲ್ಲಾ ಹತ್ತನೆಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಣೇಬೆನ್ನೂರಿನ ಹಿರಿಯ ಲೇಖಕಿ ಮಂಜುಳಾ ಪಿ.ನಾಮದೇವ ಆಯ್ಕೆಯಾಗಿದ್ದಾರೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲಾ ವ್ಯಾಪ್ತಿ ಸಮ್ಮೇಳನ ಸೆ. 18 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ. ವಿಚಾರಗೋಷ್ಠಿ, ಕವಿಗೋಷ್ಠಿ, ಗಣ್ಯರ ಗೌರವ ಹಾಗೂ ಇತರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತ ಕವಿಗಳು ಸೆ. 11ರೊಳಗೆ ಹೆಸರು ನೋಂದಾಯಿಸಲು ಜಿಲ್ಲಾ ಗೌರವಾಧ್ಯಕ್ಷ ಶಂಕರ ಕುಂಬಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net