

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಖಂಡ ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿ ಡಾ.ಸಂದೀಪ ಬೂದಿಹಾಳ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಡಾ.ಎಚ್.ಬಿ.ಕೊರವರ, ಸವಿತಾ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಪ್ರಲ್ಹಾದ ಗೆಜ್ಜಿ, ಕಾರ್ಯದರ್ಶಿಯಾಗಿ ಸಿದ್ಧಲಿಂಗೇಶ ನೀಲಗುಂದ, ಕೋಶಾಧ್ಯಕ್ಷರಾಗಿ ಮೃತ್ಯುಂಜಯ ಮಟ್ಟಿ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕಾಶೀನಾಥ ಬಿಳಿಮಗ್ಗದ, ಆರ್.ಜಿ.ಗಂಗಾವತಿ, ಕೊತ್ತಲ ಮಹಾದೇವಪ್ಪ, ರಾಘವೇಂದ್ರ ಕುಲಕರ್ಣಿ, ರೇಣುಕಾ ದೇಶಪಾಂಡೆ ಆಯ್ಕೆಯಾದರು ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.