ಕಚುವಿನಹಳ್ಳಿಯಲ್ಲಿ ಶ್ರೀದೊಡ್ಡಮ್ಮತಾಯಿ ದೇಗುಲ ಉದ್ಘಾಟನೆ

IMG-20230614-WA0015
ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೊಡ್ಡಮ್ಮತಾಯಿ ದೇವಾಲಯದ ಉದ್ಘಾಟನೆ ಅಂಗವಾಗಿ ಗಂಗಾ ಹಾಗೂ ಗೋಪೂಜೆ ನೆರವೇರಿಸಲಾಯಿತು.
Published on

ಹನಗೋಡು: ಹೋಬಳಿಯ ಕಚುವಿನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನವನ್ನು ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಉದ್ಘಾಟಿಸಲಾಯಿತು.

ಹುಣಸೂರಿನ ಅರ್ಚಕ ಶೇಷಚಲಯ್ಯ ನೇತೃತ್ವದ ತಂಡವು ಎರಡು ದಿನಗಳ ಕಾಲ ದೇವಾಲಯದ ಆವರಣದಲ್ಲಿ ಗಂಗಾ ಮತ್ತು ಗೋ ಪೂಜೆಯೊಂದಿಗೆ ವಿಶೇಷ ಹೋಮ, ಹವನ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿತು. ಬಳಿಕ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ದೊಡ್ಡಮ್ಮತಾಯಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಗ್ರಾಮದ ಯಜಮಾನರಾದ ಮಾದೇಗೌಡ, ಚಿ.ಯ.ರೇವಣ್ಣ, ಕೆ.ಬಿ.ಉಜ್ಜನಿಗೌಡ, ಕೆ.ಎಸ್.ಆನಂದ್, ಸದಾಶಿವ, ಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಡಿ.ಮಹೇಶ್, ಸದಸ್ಯರಾದ ಅಮಾಸೆಗೌಡ, ರುಕ್ಮಿಣಿ ಸುರೇಶ್, ದೇವಾಲಯದ ಅರ್ಚಕರಾದ ಕರೀಗೌಡ, ಶಿವಣ್ಣನಾಯಕ, ಅರ್ಜುನ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net