ಕಗ್ಗಂಟಾದ ಕವಾಡಿಗರ ಹಟ್ಟಿ ಪ್ರಕರಣ

CTD 06 Kalani 1--02
Published on

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ಕಲುಷಿತ ನೀರು ಸೇವನೆ ಪ್ರರಕರಣಕ್ಕೆ ಸಂಬಂಧಿಸಿದಂತೆ ಕವಾಡಿಗರಹಟ್ಟಿಯ ದಲಿತ ಕಾಲನಿಯಲ್ಲಿ ಭಾನುವಾರ ಮತ್ತೆ 11 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಚಿಕಿತ್ಸೆ ಪಡೆಯುವವರ ಸಂಕ್ಯೆ 206ಕ್ಕೆ ಏರಿದೆ.
ಈ ಪ್ರಕರಣಕ್ಕೆ ಕಾಲರಾ ಮಾದರಿಯ ಬ್ಯಾಕ್ಟೀರಿಯಾ ಕಾರಣವಿರಬಹುದು ಎಂದು ಶಂಕಿಸಲಾಗಿದ್ದರೂ ಅಸ್ವಸ್ಥರ ಸಂಖ್ಯೆ ಇಳಿಕೆಯಾಗದ ಹಿನ್ನೆಲೆಯಲ್ಲಿ ಮತ್ತಿನ್ನೇನಾದರೂ ಇರಬಹುದೇ ಎಂದು ಹುಡುಕುವ ಪ್ರಯತ್ನಗಳು ನಡೆದಿವೆ.
ತಜ್ಞ ವೈದ್ಯರ ತಂಡದ ಸಲಹೆ ಮೇರೆಗೆ ಟ್ಯಾಂಕ್‌ಗಳಲ್ಲಿನ ಕಲುಷಿತ ನೀರಿನ ಮರು ಪರಿಶೀಲನೆ, ಚರಂಡಿ ನೀರು, ಹೊಸದಾಗಿ ಅಸ್ವಸ್ಥರಾದವರ,ಚಿಕಿತ್ಸೆ ಪಡೆಯುತ್ತಿರುವವರ ಮಲ, ರಸ್ತೆ ಬದಿ ಹರಿಯುತ್ತಿರುವ ಕೊಳಚೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಮತ್ತೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ವೈದ್ಯರ ತಂಡ ಪ್ರಕರಣದ ಮೂಲ ಪತ್ತೆಗೆ ವಿವಿಧ ಆಯಾಮಗಳಲ್ಲಿ ಸಾಗುತ್ತಿದ್ದು, ವರದಿ ಬಂದ ನಂತರವೇ ನಿಖರ ಕಾರಣ ತಿಳಿಯಲಿದೆ.
ಜುಲೈ 31ರಂದು 41 ಇದ್ದ ಅಸ್ವಸ್ಥರ ಸಂಖ್ಯೆ ಇದೀಗ 200ರ ಗಡಿ ದಾಟಿದೆ. ಕವಾಡಿಗರಹಟ್ಟಿಯಲ್ಲಿ 735 ಕುಟುಂಬಗಳಿವೆ. 3,206 ಜನ ವಾಸಿಸುತ್ತಿದ್ದಾರೆ. ದಲಿತ ಕಾಲನಿಯಲ್ಲಿ 320 ಕುಟುಂಬಗಳಿದ್ದು 2,064 ಜನರಿದ್ದಾರೆ.

*ಮೂಲಸೌಕರ್ಯ ಗಗನಕುಸುಮ
ಕವಾಡಿಗರಹಟ್ಟಿಯಲ್ಲಿ ಮೂಲಸೌಕರ್ಯ ಗಗನಕುಸುಮವಾಗಿದೆ. ಗುಣಮಟ್ಟದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಸರಿ ಇಲ್ಲ, ಕಲುಷಿತ ನೀರು ರಸ್ತೆ ಬದಿ ಹರಿಯುತ್ತಿದ್ದು ದುರ್ವಾಸನೆ ಬೀರುತ್ತಿದೆ. ಅಗತ್ಯ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿ ಚುನಾಯಿತರಾದ ಈ ಭಾಗದ ಜನಪ್ರತಿನಿಧಿಗಳಿಂದ ಯಾವುದೇ ಕೆಲಸಗಳಾಗಿಲ್ಲ.

*ಕೋಟ್
ಕಾಲನಿ ಸಮೀಪ ಐದಾರು ಹೊಸ ಪ್ರಕರಣ ಕಂಡು ಬಂದ ನಂತರ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಎಲ್ಲ ಆಯಾಮಗಳಿಂದಲೂ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಹತೋಟಿಗೆ ತರುವಲ್ಲಿ ನಿರತರಾಗಿದ್ದೇವೆ.
ಡಾ.ಆರ್.ರಂಗನಾಥ್, ಡಿಎಚ್‌ಒ
ಮಗ್‌ಶಾಟ್)

ತಿಂಗಳ ಮುಂಚೆ ತಿಳಿಸಿದ್ದೆವು
ನೀರಿನ ಬಣ್ಣ ಬದಲಾದ ವಿಷಯವನ್ನು ತಿಂಗಳ ಮುಂಚೆಯೇ ವಾರ್ಡ್ ಸದಸ್ಯರು, ನೀರಗಂಟಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮೂಲಸೌಕರ್ಯ ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು ಸ್ಪಂದಿಸಿಲ್ಲ. ಸಚಿವರು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದು, ಕಾದು ನೋಡಬೇಕಿದೆ ಎನ್ನುತ್ತಾರೆ ಕಾಲನಿಯ ನಿವಾಸಿ ಯಲ್ಲಪ್ಪ ಇತರರು. ಕಾಲನಿಯೊಳಗೆ ಹೊಸ ಪೈಪ್‌ಲೈನ್ ಅಳವಡಿಸಬೇಕು ಎಂದು ಸ್ಥಳೀಯರು ಬಿಗಿಪಟ್ಟು ಹಾಕಿದ್ದಾರೆ.

ಸ್ವಚ್ಛತೆ ಪರಿಶೀಲಿಸಿದ ಎಡಿಸಿ
ಕವಾಡಿಗರಹಟ್ಟಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಭಾನುವಾರ ಭೇ ಟಿ ನೀಡಿ ಸ್ವಚ್ಛತೆ ಪರಿಶೀಲಿಲಿಸಿದರು. ಮನೆ-ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ವಿಚಾರಿಸಿದರು. ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ಕುರಿತು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ಇತರರಿದ್ದರು.
ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಅಗತ್ಯ
ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಒತ್ತಾಯಿಸಿದರು.
ರಾಜ್ಯದ ಹಲವೆಡೆ ಈ ರೀತಿ ಘಟನೆಗಳು ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸಾವಿನ ಬಳಿಕ ಪರಿಹಾರ ನೀಡುವುದು ಒಂದು ಭಾಗವಾದರೆ, ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಸವೇಶ್ವರ ಆಸ್ಪತ್ರೆಗೆ ಭೇಟಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇತರರಿದ್ದರು.

ಪ್ರಕರಣ ನಿಗೂಢ
ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ನಿಗೂಢವಾಗಿದೆ ಎಂದು ನಟ ಚೇತನ್ ಅಹಿಂಸಾ ದೂರಿದರು. ಸಾವು-ನೋವಿಗೆ ಕಲುಷಿತ ನೀರು ಕಾರಣವೇ ಅಥವಾ ಬೇರಾವ ಅಂಶಗಳು ಇವೆಯೇ ಎಂಬ ಸತ್ಯ ಹೊರಬರಲು ಪಾರದರ್ಶಕ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಎಚ್ಚರಿಕೆ ವಹಿಸಿದ್ದರೆ ಸಾವಾಗುತ್ತಿರಲಿಲ್ಲ
ಚಿತ್ರದುರ್ಗ: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಬಡವರ ಜೀವದ ಜತೆ ಸರ್ಕಾರ ಆಟವಾಡಬಾರದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯುವ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದರು. ತಿಪ್ಪೇಸ್ವಾಮಿ, ಶರೀಫ್, ಶಿವಣ್ಣ, ಮಂಜುನಾಥ, ಓಬಳೇಶ, ಮಣಿ, ರಾಮು ಇತರರಿದ್ದರು.

ಅವಘಡ ಸಂಭವಿಸಿದ ಸಂದರ್ಭ ಎಚ್ಚರ ಸಲ್ಲ
ಚಿತ್ರದುರ್ಗ: ತೆರೆದ ಕೊಳವೆಬಾವಿಯಲ್ಲಿ ಮಗು ಬಿದ್ದು ಮೃತಪಟ್ಟ ಸಂದರ್ಭ ಅವುಗಳನ್ನು ಮುಚ್ಚುವುದು, ಕಲುಷಿತ ನೀರು ಸೇವನೆ ಆಗಿ ಸಾವು ಸಂಭವಿಸಿದ ವೇಳೆ ಜಲಸಂಗ್ರಹಗಾರಗಳ ಸ್ವಚ್ಛತೆ ಕಾರ್ಯ ಕೈಗೊಳ್ಳುವುದು ಅಧಿಕಾರಿಗಳ ಅಸಡ್ಡೆಗೆ ಕೈಗನ್ನಡಿ ಎಂದು ಸಂಗೊಳ್ಳಿ ರಾಯಣ್ಣ ಸೇನೆ ಅಧ್ಯಕ್ಷ ಟಿ.ಆನಂದ್ ದೂರಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ರೂಪಿಸಿ ಆದೇಶಿಸಲಾಗಿರುತ್ತದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವರ್ಗದ ನಿರ್ಲಕ್ಷೃದಿಂದ ಕವಾಡಿಗರಹಟ್ಟಿಯಲ್ಲಿನ ದುರಂತ ವಿವಿಧ ರೂಪದಲ್ಲಿ ವಿವಿಧೆಡೆ ಸಂಭವಿಸುತ್ತಲೇ ಇರುತ್ತವೆ ಎಂದಿದ್ದಾರೆ.
ತೆರೆದ ಕೊಳವೆಬಾವಿ ಮುಚ್ಚುವುದು, ಜಲಸಂಗ್ರಹಗಾರಗಳ ಸ್ವಚ್ಛತೆ, ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ, ಚರಂಡಿ ಸೇರಿ ವಿವಿಧೆಡೆ ಸ್ವಚ್ಛತೆ, ಔಷಧ ಸಿಂಪಡಣೆ ಸೇರಿ ವಿವಿಧ ಯೋಜನೆಗಳು ನಿರಂತರವಾಗಿ ನಡೆಯುತ್ತಿರಬೇಕು. ಯಾವದೋ ಅವಘಡ ಸಂಭವಿಸಿದ ತಕ್ಷಣ ಎಚ್ಚೆತ್ತುಕೊಳ್ಳುವುದು ದಕ್ಷ ಆಡಳಿತದ ಲಕ್ಷಣವಲ್ಲ. ಈಗಲಾದರೂ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಆದೇಶಗೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿ ವರ್ಗ ಮುಂದಾಗುವಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net