ಕಕ್ಷಿದಾರನಿಗೆ ನ್ಯಾಯ ಒದಗಿಸಿ

bkt-6-3
Published on

ಬಾಗಲಕೋಟೆ : ಕಾನೂನಿನ ತತ್ವ ಆದಾರದಡಿ ಕಕ್ಷಿದಾರರಿಗೆ ಖಚಿತ ನ್ಯಾಯವನ್ನು ಒದಗಿಸುವಲ್ಲಿ ಜಿ.ಎಚ್ ಛೆಬ್ಬಿ ಅವರು ತಮ್ಮ ಜೀವನವನ್ನೆ ಮುಡಪಾಗಿಟ್ಟವರು,ಅವರ ತತ್ವ ಆದರ್ಶ ಇಂದಿನ ಯುವ ನ್ಯಾಯವಾದಿಗಳಿಗೆ ವೇದಪಾಠ ಇದ್ದಂತೆ ಎಂದು ಗೌರವಾನ್ವಿತ ನ್ಯಾಯಮೂರ್ತಿ, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಎಸ್.ಎಸ್.ಬನ್ನೂರಮಠ ಹೇಳಿದರು.

ಬಿವ್ಹಿ.ವ್ಹಿ.ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ ಬಾಗಲಕೋಟೆ, ಹಾಗೂ ಜಿ,ಎಚ್,ಛಬ್ಬಿ ಅಸೋಶಿಯೇಟ್ಸ್ ಬಾಗಲಕೋಟೆ,ಮತ್ತು ಜಿಲ್ಲಾ ವಕೀಲರ ಸಂಘ ಬಾಗಲಕೋಟೆ ಆಶ್ರಯದಲ್ಲಿ ಬಸವೇಶ್ವರ ಇಂಜನಯರಿಂಗ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳಾದ ದಿವಂಗತ, ಜಿ.ಎಚ್.ಛಬ್ಬಿ ಅವರ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತತ ಪ್ರಯತ್ನ ನೀರಂತರ ಅಧ್ಯಯನಕ್ಕೆ ಭಾಷೆಮೆಲಿನ ಹಿಡಿತ,ಯಾವುದೆ ವಿಷಯದ ಕುರಿತು ನಿರ್ಣಯ ತಗೆದುಕೋಳ್ಳಲು ಅವರು ಸಮರ್ಥರಾಗಿದ್ದು,ಕಾನೂನಿನ ತತ್ವ ಆಧಾರದಡಿ ಕಕ್ಷಿದಾರರಿಗೆ ಖಚಿತ ನ್ಯಾಯವನ್ನು ಒದಗಿಸಿಕೊಡುವುದರಲ್ಲಿ ಅವರು ತಮ್ಮ ಜೀವನವನ್ನೆ ಮುಡಾಗಿಟ್ಟರು,ವೃತ್ತಿಯಲ್ಲಿ ಬಹು ಏತ್ತರಕ್ಕೆ ಏರಿ ಸಾಧನೆ ಮಾಡಿದವರು, ಅಂಥವರನ್ನು ಪಡೆದ ಬಾಗಲಕೋಟೆ ನ್ಯಾಯವಾದಿಗಳ ಬಳಗ ನಿಜಕ್ಕು ಅದೃಷ್ಷವಂತರು, ಇಂದು ನ್ಯಾಯವಾದಿಗಳಾಗಲು ಮಾತೃಭಾಷೆಯ ಜೋತೆಗೆ ಇಂಗ್ಲೀಷ ಭಾಷೆಯ ಜ್ಷಾನ ಅವಶ್ಯವಾಗಿದೆ, ಆಧುನಿಕ ಸ್ಪಾರ್ದಾತ್ಮಕ ಅಧ್ಯಯನದಿಂದ ನಮ್ಮನ್ನು ನಾವು ನವಿಕರಿಸಿಕೊಳ್ಳಬೇಕು ಎಂದ ಅವರು ಕ್ರಾಸ್ ಪರೀಕ್ಷೆಯ ಮಸೂರದ ಮೂಲಕ ಸತ್ಯದ ಸಂಗತಿ ಜೀವಂತವಾಗುತ್ತದೆ,ಅದರಲ್ಲಿನ ಸುಳ್ಳುಗಳು ಧುಮುಕುತ್ತವೆ ಎಂದು ತಿಳಿಸಿದರು.
ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಭಾವತಿ ಎಮ್.ಹೀರೆಮಠ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ಆರ್.ಬಿ.ಬೂದಿಹಾಳ ಮಾತನಾಡಿದರು. ಸುನಿಲ್ ಶೆಟ್ಟರ ಪರಿಚಯಿಸಿದರು. ಡಾ.ಎಮ್.ಪಿ.ಚಂದ್ರಿಕಾ ಸ್ವಾಗತಿಸಿದರು.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿತ್ತಲ್‌ಕೋಡ ವಂದಿಸಿದರು, ಐಶ್ವರ್ಯ ಲಿಂಗದ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಆಪ್ರೀನ ಶೇಕ್, ಸ್ವಾತಿ ಜೋಶಿ ಕಾರ್ಯಕ್ರಮವನ್ನು ನೀರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net