ಕಕ್ಕೇರಾದಲ್ಲಿ ಅದ್ದೂರಿ ರಥೋತ್ಸವ

01
Published on

ಕಕ್ಕೇರಾ : ಇಲ್ಲಿನ ಸಂಗಮೇಶ್ವರ ಮಠದ ಶ್ರೀ ಕರಿಯಪ್ಪ ತಾತನವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಲಕ್ಷಾಂತರ ಭಕ್ತರ ಮಧ್ಯೆ ಹೂವಿನ ರಥೋತ್ಸವ ಜರುಗಿತು.

ಸಂಜೆ ೬.೪೦ರ ಸುಮಾರಿಗೆ ವಿವಿಧ ವಾದ್ಯ-ಮೇಳದೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ, ರಥದ ಸುತ್ತ ಕಳಸದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ಕಳಸವನ್ನಿರಿಸುತ್ತಿದ್ದಂತೆ ನೆರೆದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಖುಷಿಪಟ್ಟರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಸಮೂಹ ರಥಕ್ಕೆ ಹೂ, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಮೆರೆದರು. ಭಕ್ತರು ಶ್ರೀ ಸಂಗಮೇಶ್ವರ ಮಹಾರಾಜಕೀ ಜೈ ಘೋಷ ಮೊಳಗಿದವರು.

ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ಸಲ್ಲಿಸಿ ವಿವಿಧ ಪೂಜೆ ಸಲ್ಲಿಸಿದರು. ನಾಗಮೂರ್ತಿಗೆ ಹಾಲೆರೆದು ತಮ್ಮ ಭಕ್ತಿಯ ಪರಾಕಾಷ್ಠೆ ಸಲ್ಲಿಸಿದರು. ಪಂಚಮಿ ದಿನ ಶ್ರೀಮಠದ ನಾಗದೇವರ ದಾರ ಧರಿಸುವುದರಿಂದ ಸರ್ಪದೋಷದಿಂದ ಮುಕ್ತಿಯಾಗುವ ಪ್ರತೀತಿ ಹಿನ್ನೆಲೆಯಲ್ಲಿ ಭಕ್ತವೃಂದ ತಮ್ಮ ಭಕ್ತಿ ಕಾಣಿಕೆ ಸಲ್ಲಿಸಿ ನಾಗದೇವರ ದಾರ ಪಡೆದು ತಮ್ಮ ಕೈಗಳಿಗೆ ಕಟ್ಟಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ಹನುಮಂತರಾಯಗೌಡ ಜಹಾಗೀರದಾರ, ಅಯ್ಯಣ್ಣ ಪೂಜಾರಿ, ಮಾನಯ್ಯ ಪೂಜಾರಿ, ಗುಂಡಪ್ಪ ಸೊಲಾಪುರ, ರಾಜು ಹವಾಲ್ದಾರ್, ಪರಮಣ್ಣ ಕುಂಬಾರ, ದೇವಿಂದ್ರಪ್ಪ ಬಳಿಚಕ್ರ, ಬಸವರಾಜ ಆರೇಶಂಕರ, ರಮೇಶಶೆಟ್ಟಿ, ಪರಮಣ್ಣ ಗುತ್ತೇದಾರ್, ಸಿದ್ದಣ್ಣ ದೇಸಾಯಿ, ಲಕ್ಷö್ಮಣ ಲಿಂಗದಳ್ಳಿ, ಪರಮಣ್ಣ ತೇರಿನ್, ಗುಡದಪ್ಪ ಕುರಿ ಹಾಗೂ ಸಹಸ್ರಾರು ಭಕ್ತವೃಂದ ವಿವಿಧ ಗ್ರಾಮಗಳಿಂದ ಆಗಮಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್‌ಐ ಸುರೇಶ ಭಾವಿಮನಿ, ಎಎಸ್‌ಐ ಮಧುನಾಯಕÀ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net