ಕಕದ ಅಭಿವೃದ್ಧಿ ಮರೆತ ಬಿಜೆಪಿಗರು

oppo_2
oppo_2
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ, ಕಲಬುರಗಿ ಜಿಲ್ಲೆಯ ಅಭಿವೃದ್ಧಿಯನ್ನು ಮರೆತಿರುವ ಬಿಜೆಪಿಗರು ವಾಸ್ತವ ಸಮಸ್ಯೆಗಳನ್ನು ಬಿಟ್ಟು, ರಾಜಕಾರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಜಾಗೃತ ಜನ ವೇದಿಕೆ ಅಧ್ಯಕ್ಷ ಮಹೇಶ ಕುಲ್ಕರ್ಣಿ ಹೇಳಿದರು.

ಸಚಿನ ಪಾಂಚಾಳ ಆತ್ಮಹತ್ಯೆ ತನಿಖೆ ಸಿಐಡಿ ಆದೇಶಕ್ಕೆ ನೀಡಿದ್ದು, ತನಿಖೆ ಆರಂಭವಾಗಿದೆ. ಇದರಲ್ಲಿ ಬಿಜೆಪಿ ನಾಯಕರು ಅಸ್ತಿತ್ವ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಸರಣಿ ಅನ್ಯಾಯಗಳು ಆಗಿವೆ. ಅದನ್ನು ಬಿಜೆಪಿಗರು ಪ್ರಶ್ನಿಸುತ್ತಿಲ್ಲ. ೨೦೧೪ರ ಯುಪಿಎ-೨ ಅವಧಿಯಲ್ಲಿ ಜಿಲ್ಲೆಗೆ ರಾಷ್ಟಿçÃಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಜ್) ಘೋಷಿಸಲಾಗಿತ್ತು. ಅಂದಿನ ರಾಜ್ಯದ ಕಾಂಗ್ರೆಸ್ ಸರ್ಕಾರ ೩ ಸಾವಿರ ಎಕರೆ ಜಮೀನು ನೀಡಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಕೈಬಿಟ್ಟಿತ್ತು. ರೈಲ್ವೆ ವಿಭಾಗ ಘೋಷಣೆ ಆಗಿದ್ದರೂ ಸ್ಥಾಪನೆ ಆಗುತ್ತಿಲ್ಲ, ಇಎಸ್‌ಐ ಮೆಡಿಕಲ್ ಆಸ್ಪತ್ರೆ, ಕಾಲೇಜನ್ನು ಏಮ್ಸ್ಗೆ ಉನ್ನತೀಕರಿಸುವುದನ್ನು ಮೋದಿ ಸರ್ಕಾರ ತಳ್ಳಿ ಹಾಕಿದೆ ಎಂದು ಆರೋಪಿಸಿದರು.

ಕಲಬುರಗಿ ಜಿಲ್ಲೆಯು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಜಿಲ್ಲೆಯ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಶ್ರಮಿಸುತ್ತಿದ್ದು, ಅಭಿವೃದ್ಧಿ ಬಗ್ಗೆ ಬಿಜೆಪಿ ಮಾತನಾಡಲಿ. ಆತ್ಮಹತ್ಯೆ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net