ಕಕ ಪ್ರಗತಿ ಮನದಟ್ಟು ಮಾಡುವ ಪ್ರಯತ್ನ

0706Klb12
Published on

ಕಲಬುರಗಿ: ಕಲ್ಯಾಣ ರ‍್ನಾಟಕ ಭಾಗದ ರ‍್ಥಿಕ, ಸಾಮಾಜಿಕ, ಧರ‍್ಮಿಕ ಕ್ಷೇತ್ರದ ಜಾಗೃತಿ ಜತೆಗೆ ದಾಸರ ಜಾತ್ಯತಿತ ಮನೋಭಾವ, ಈ ಭಾಗದ ಪ್ರಗತಿಗೆ ಆಡಳಿತ ನಡೆಸಿದ, ನಡೆಸುವವರು ಗಮನರಿಸಬೇಕಾದ ಅಂಶಗಳನ್ನು ಮನದಟ್ಟು ಮಾಡುವ ಪ್ರಯತ್ನವನ್ನು ಹಿರಿಯ ಸಾಹಿತಿ, ಪತ್ರರ‍್ತ ಶ್ರೀನಿವಾಸ ಸಿರನೂರಕರ್​ ಮಾಡಿದ್ದಾರೆ ಎಂದು ಪುಸ್ತಕೋದ್ಯಮಿ ಬಸವರಾಜ ಕೊನೇಕ್​ ಹೇಳಿದರು.

ಕನ್ನಡ ಭವನದಲ್ಲಿ ಶ್ರೀವಿಜಯ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಡಿ ಶನಿವಾರ ರ‍್ಪಡಿಸಿದ್ದ ಕರ‍್ಯಕ್ರಮದಲ್ಲಿ ಶ್ರೀನಿವಾಸ ಸಿರನೂರಕರ್​ ರಚಿಸಿದ ದಾಸ ಸಾಹಿತ್ಯದ ಆಧುನಿಕ ಆಯಾಮಗಳು, ಕಲ್ಯಾಣ ರ‍್ನಾಟಕದ ಅರಣ್ಯರೋದನ ಕೃತಿಗಳ ಲೋಕರ‍್ಪಣೆ ಮಾಡಿ ಮಾತನಾಡಿದ ಅವರು, ಎರಡೂ ಕೃತಿಗಳಲ್ಲಿ ದಾಸ ಸಾಹಿತ್ಯದ ಸಾಮರಸ್ಯ ನೆಲೆಗಳನ್ನು ಗುರುತಿಸಿ ದಾಸರ ಜಾತ್ಯತಿತ ಮನೋಭಾವವನ್ನು ಸಿರನೂರಕರ್​ ಹಿಡಿದಿಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾಸ ಸಾಹಿತ್ಯದ ಆಧುನಿಕ ಆಯಾಮಗಳು ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕ ವ್ಯಾಸರಾಜ ಸಂತೆಕೆಲ್ಲೂರ ಮಾತನಾಡಿ, ದಾಸ ಸಾಹಿತ್ಯ ಭಗವಂತ, ಭಕ್ತನಿಗೆ ಸಂಬಂಧಿಸಿದ್ದಲ್ಲ. ಬದುಕಿನಲ್ಲಿ ನೈತಿಕತೆ, ಧರ‍್ಯ, ಸ್ಥರ‍್ಯ ತುಂಬಲು ಪೂರಕವಾಗಿದೆ ಎಂದು ಹೇಳಿದರು.

ಕಲ್ಯಾಣ ರ‍್ನಾಟಕದ ಅರಣ್ಯರೋದನ ಕೃತಿ ಕುರಿತು ವಿಭಾಗೀಯ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನರ‍್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ಹೊಸ ತಲೆಮಾರಿನವರು ಮಾತು, ಭಾಷಣ, ಬರಹಗಳನ್ನು ಅಧಿಕೃತವಾಗಿ ತೆಗೆದುಕೊಳ್ಳುತ್ತಿಲ್ಲ. ಇಂಥ ಸಂರ‍್ಭದಲ್ಲಿ ಲೋಕಗ್ರಹಿಕೆ ಕಟ್ಟಿಕೊಡುವ ಪ್ರಯತ್ನ ಕೃತಿ ಮೂಲಕ ಮಾಡಲಾಗಿದೆ ಎಂದರು.

ಕಕ ಹಿಂದುಳಿಯುವಿಕೆಗೆ ಕಾರಣ, ಆಗಬೇಕಾದ ನಿಖರ ಅಂಕಿ&ಅಂಶಗಳನ್ನು ಲೇಖಕರು ಕೃತಿಯಲ್ಲಿ ಒದಗಿಸಿದ್ದಾರೆ. ಈ ಭಾಗದ ಅಭಿವೃದ್ಧಿಯ ಒಂಬತ್ತು ಲೇಖನ, ಇತಿಹಾಸದ ನಾಲ್ಕು, ಭವಿಷ್ಯದ ಕುರಿತ ಲೇಖನಗಳಿವೆ. ಕಕ ಕೋಷ್ಟಕ, ಅಂಕಿ&ಸಂಖ್ಯೆಗಳು ಗಮನರ‍್ಹ ಎಂದು ಹೇಳಿದರು.

ಲೇಖಕ ಶ್ರೀನಿವಾಸ ಸಿರನೂರಕರ್​ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ.ಸ್ವಾಮಿರಾವ ಕುಲರ‍್ಣಿ, ಎ.ಕೆ. ರಾಮೇಶ್ವರ, ಅಮೋಘ ಸಿರನೂರಕರ್​, ಪ್ರಭಾಕರ ಜೋಶಿ, ವಿನೋದ, ಸುಬ್ರಾವ್​ ಕುಲರ‍್ಣಿ, ಡಾ.ಸುನಂದಾ, ಸಿ.ಎಸ್​. ಮಾಲಿಪಾಟೀಲ್​ ಇತರರಿದ್ದರು. ಸಂಜೀವ್​ ಸಿರನೂರಕರ್​ ಸ್ವಾಗತಿಸಿದರು. ಸ್ನೇಹಾ ಸಿರನೂರಕರ್​ ಪ್ರರ‍್ಥಿಸಿದರು. ವೆಂಕಟೇಶ ಮುದಗಲ್​ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net