ಕಕ ಉತ್ಸವ ಸಂಭ್ರಮದಿಂದ ಆಚರಣೆ

MEETINIG
Published on


ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಈ ಬಾರಿ ಜಿಲ್ಲಾಡಳಿತದಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.

ಶನಿವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕಕ (ಹೈಕ ವಿಮೋಚನಾ ದಿನ) ಉತ್ಸವದ ನಿಮಿತ್ತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆ.17 ರಂದು ನಡೆಯಲಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿರುವಂತೆ ಅಕಾರಿಗಳು ಶ್ರಮಿಸಬೇಕು. ಅಂದು ಬೆಳಗ್ಗೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಕಾರಿ, ಸಿಬ್ಬಂದಿ ತಪ್ಪದೇ ಭಾಗವಹಿಸಬೇಕು. ಮೈದಾನದ ಸುತ್ತಲೂ ಅವಶ್ಯಕತೆ ಇದ್ದಲ್ಲಿ ಬ್ಯಾರಿಕೇಡ್ ನಿರ್ಮಾಣ,, ಶಿಷ್ಟ್ಟಾಚಾರ ಪಾಲನೆ, ಸೂಕ್ತ ಪೊಲೀಸ್ ಬಂದೊಬಸ್ತ್, ಅಗ್ನಿಶಾಮಕ ವಾಹನ, ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರೊಂದಿಗೆ ಚಿಕಿತ್ಸಾ ವಾಹನ ಇರುವಂತೆ ನೋಡಿಕೊಳ್ಳಬೇಕು ಎಂದರು.

ನಮ್ಮ ಭಾಗಕ್ಕೆ ನಿಜಾಮನ ಕೈಯಿಂದ ಸ್ವಾತಂತ್ರ್ಯ ಸಿಕ್ಕು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಇದಾಗಿರುವುದರಿಂದ ಜಿಲ್ಲೆಯ 16 ಸ್ಥಳಗಳಲ್ಲಿ ಆರೋಗ್ಯ ಮೇಳ, ಉದ್ಯೋಗ ಮೇಳ, ಕೃಷಿ ಕಾರ್ಯಾಗಾರ,, ಕಲ್ಯಾಣ ಕರ್ನಾಟಕ ಕರಕುಶಲ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಅಮರೇಶ ಆರ್. ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ ವೇದಮೂತರ್ಿ, ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಕ್ರೀಡಾ ಇಲಾಖೆ ಅಕಾರಿ ರಾಜು ಬಾವಿಹಳ್ಳಿ, ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ಡಿಡಿಪಿಐ ಶಾಂತಗೌಡ ಪಾಟೀಲ್ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net