

ಸುರಪುರ : ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮತ್ತು ವಿಶ್ವಕರ್ಮ ಜಯಂತಿ ತಾಲೂಕು ಆಡಳಿತದಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ತಿಳಿಸಿದರು.
ನಗರದ ತಹಸಿಲ್ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಮತ್ತು ವಿಶ್ವಕರ್ಮ ಜಯಂತಿ ನಿಮಿತ್ತ ಸೋಮವಾರ ಕರೆದ್ದಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೆ.೧೭ರಂದು ನಗರದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು. ತಾಲೂಕು ಆಡಳಿತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಅಂದು ಬೆಳಗ್ಗೆ ೯ಕ್ಕೆ ಧ್ವಜಾರೋಹಣ ನಡೆಯಲಿದೆ. ಶಾಸಕ ರಾಜಾ ವೆಂಕಟಪ್ಪ ನಾಯಕ ಅಧ್ಯಕ್ಷತೆ ವಹಿಸುವರು. ಇಲಾಖೆಯ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ತಹಸಿಲ್ ಕಚೇರಿಯಲ್ಲಿ ಸೆ.೧೭ರಂದು ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಗುತ್ತದೆ. ಬೆಳಗ್ಗೆ ೯ರಿಂದ ೧೧ರವರೆಗೆ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ತಳವಾರಗೇರಾ, ಮೌನೇಶ ವಿ., ಮಹೇಶಕುಮಾರ, ಶಂಭು ಪ್ರತಿಹಸ್ತ, ಮಹೇಶ ಸಗರ, ಸುರೇಶ ಕುಳಗೇರಿ, ನಾರಾಯಣ ಪತ್ತಾರ, ಶಿವಕುಮಾರ ಕಕ್ಕೇರಾ, ಯಲ್ಲಪ್ಪ ಗೋಗಿ, ಸಿಡಿಪಿಒ ಆನಂದ ಕಾಂಬ್ಳೆ, ನಗರಸಭೆಯ ಶಿವಪುತ್ರ, ಎಫ್‌ಡಿಎ ಸಿದ್ಧಪ್ಪ, ಇಸಿಒ ಶಿವಪುತ್ರಪ್ಪ, ಪರಮೇಶ್ವರ, ವೀರೇಶ, ಪೂಜಾ ಖರ್ಗೆ, ನಾಗರಾಜ, ರೇಷ್ಮಾ, ಕಾವೇರಿ, ಕವಿತಾ, ಅನಿಲಕುಮಾರ, ಯಲ್ಲಪ್ಪ ಹುಲಿಕಲ್ ಇತರರಿದ್ದರು.