

ಬಬಲೇಶ್ವರ : ತಾಲೂಕಿನ ಕಂಬಾಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಕವಿತಾ ಮಲ್ಲಯ್ಯ ಮಠಪತಿ ಹಾಗೂ ಉಪಾಧ್ಯಕ್ಷರಾಗಿ ಪಾಂಡಪ್ಪ ಮಾದಪ್ಪ ದಳವಾಯಿ ಆಯ್ಕೆಯಾದರು. ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಚಂದ್ರಕಾಂತ್ ಭಜಂತ್ರಿ ನಿರ್ವಹಿಸಿದರು.
ಗ್ರಾ.ಪಂ. ಸದಸ್ಯರಾದ ಚಂದಪ್ಪ ಹರಿಜನ್, ಮುದುಕಪ್ಪ ಜಾನೋಜಿ, ಸುಮಿತ್ರಾ ಸಿಂಗಿ, ಕಮಲವ್ವ ನಾವಿ, ಸುಮಿತ್ರ ಶೇಗುಣಸಿ, ಬಸವರಾಜ ಜಮಖಂಡಿ, ಶಾಂತಾಬಾಯಿ ನಡುವಿನಮನಿ, ಹನುಮಂತ ಲಕ್ಕುರಿ, ರೇಣುಕಾ ದೊಡಮನಿ, ಶಾಂತವ್ವ ಚಲವಾದಿ, ಸುನಂದಾ ಸೊನ್ನದ, ವಿಠಲ ಶಿವಣ್ಣವರ, ಪರಶುರಾಮ್ ಅಂಬಿಗೇರ ಇದ್ದರು.
ಮುಖಂಡರಾದ ಉಮೇಶ ಮಲ್ಲಣ್ಣವರ, ಮುತ್ತಪ್ಪ ಶಿವಣ್ಣವರ್, ಮಾದೇವ ಮದರಖಂಡಿ, ಚಂದಯ್ಯ ಮಠಪತಿ, ಶಿವಾನಂದ ಸೊನ್ನದ, ಕೃಷ್ಣ ಎಚ್. ರತ್ನಾಕರ, ಡಾ. ಲಕ್ಷ್ಮಣ ದಳವಾಯಿ ಹಾಗೂ ಕಂಬಾಗಿ, ಹನುಮಸಾಗರ ಹಾಗೂ ಮಧುಗುಣಕಿಯ ಗ್ರಾಮಸ್ಥರು ಉಪಸ್ಥಿತರಿದ್ದರು.