ಕಂಬದ ಮೇಲಿಂದ ಬಿದ್ದು ಲೈನ್ಮನ್ ಸಾವು

Capture
Published on

ಔರಾದ್: ವಿದ್ಯುತ್ ಕಂಬದ ಮೇಲಿಂದ ಬಿದ್ದು ಲೈನ್ಮನ್ ಮೃತಪಟ್ಟಿರುವ ಘಟನೆ ಏಕಾಂಬಾ ಹತ್ತಿರದ ಚಿಮಣಾ ನಾಯಕ ತಾಂಡಾದಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದೆ. ಚಿಂತಾಕಿ ಗ್ರಾಮದ ಬಸರೆಡ್ಡಿ (40) ಮೃತರು. ಚಿಮಣಾ ನಾಯಕ ತಾಂಡಾದ ಹತ್ತಿರ ವಿದ್ಯುತ್ ಪರಿವರ್ತಕದಲ್ಲಿ ಸಮಸ್ಯೆ ಇರುವ ಕಾರಣ ಎಲ್ಸಿ ಪಡೆದು ಕಂಬ ಹತ್ತಿ ದುರಸ್ತಿ ಮಾಡುವಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ಪಿಎಸ್ಐ ಉಪೇಂದ್ರ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈನ್ಮನ್ ಬಸರೆಡ್ಡಿ ಅವರು ಎಲ್ಸಿ ಪಡೆದು ವಿದ್ಯುತ್ ಪರಿವರ್ತಕದ ಕಂಬ ಹತ್ತಿದ್ದಾರೆ. ಆದರೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೊದಲೇ ಎಲ್ಸಿ ಪಡೆದಿರುವ ಕಾರಣ ವಿದ್ಯುತ್ ತಗುಲಿಲ್ಲ. ದೇಹದ ಮೇಲೆ ವಿದ್ಯುತ್ ಸ್ಪಶರ್ಿಸಿದ ಯಾವುದೇ ಲಕ್ಷಣಗಳಿಲ್ಲ. ಮರಣೋತ್ತರ ಪರೀಕ್ಷೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಔರಾದ್ ಜೆಸ್ಕಾಂ ಎಇಇ ರವಿ ಕಾರಬಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net