ಕಂಪ್ಲಿಯಲ್ಲಿ ವಕ್ಫ್ ಜಾಗೃತಿ ಸಮಾವೇಶ ನಾಳೆ

02 KAMPLI 01
Published on

ಕಂಪ್ಲಿ: ಪಟ್ಟಣದ ಶಾರದಾ ಶಾಲೆ ಆವರಣದಲ್ಲಿ ಜ.4ರಂದು ಮಧ್ಯಾಹ್ನ 3 ಗಂಟೆಗೆ ವಕ್ಫ್ ಹಟಾವೋ ದೇಶ ಬಚಾವೋ ಜನಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಭರತ್ ಹೇಳಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಪ್ರಭುಮಹಾಸ್ವಾಮಿಗಳು, ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಭಾರತಿಶ್ರೀಗಳ ಸಾನ್ನಿಧ್ಯದಲ್ಲಿ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಚಂದ್ರಪ್ಪ, ಬಿ.ಪಿ.ಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ಧೇಶ್ವರ್, ಮಾಜಿ ಸಂಸದರಾದ ಬಿ.ವಿ.ನಾಯಕ್, ಪ್ರತಾಪ್‌ಸಿಂಹ, ಎಂ.ಭರತ್, ರವಿ ಬಿರಾದಾರ್, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಪಾಲ್ಗೊಳ್ಳಲಿದ್ದಾರೆ ಎಂದರು.

ಪಾದಯಾತ್ರೆ ಪ್ರಮುಖ ರಸ್ತೆ ಮೂಲಕ ಸಾಗಿ ಶಾರದಾ ಶಾಲೆ ಆವರಣದಲ್ಲಿ ಸಮಾರೋಪಗೊಂಡ ಬಳಿಕ ಬಹಿರಂಗ ಸಭೆ ನಡೆಯಲಿದೆ. ವಕ್ಫ್ ಕಾಯ್ದೆಯಿಂದ ಸಮಸ್ಯೆಗೊಳಗಾದ ರೈತರಿಂದ ದಾಖಲೆಗಳನ್ನು ಸಂಗ್ರಹಿಸಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ಗೆ ವರದಿ ಸಲ್ಲಿಸಲಾಗುವುದು. ವಕ್ಫ್‌ನಿಂದ ಸಮಸ್ಯೆಗೀಡಾದ ರೈತರು ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಸಮಿತಿ ಸದಸ್ಯರಾದ ವಾಲ್ಮೀಕಿ ಈರಣ್ಣ, ಎಂ.ಮಂಜುನಾಥ, ಪಿ.ಶಂಭುಲಿಂಗ, ಹರೀಶ್ ಚಿತ್ರಗಾರ್, ಸಂತೋಷ್ ದಮ್ಮಾಳೆ, ಕೆ.ರೇಣುಕರಾಜ, ಕೆ.ಚಂದ್ರಶೇಖರ್, ಜಿ.ಮನೋಜ್, ವಿಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net