

ಕಂಪ್ಲಿ: ತಾಲೂಕಿನ ಹಲವೆಡೆ ಭಾನುವಾರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಿಸಲಾಯಿತು.
ಪಟ್ಟಣದಲ್ಲಿ ಮೋಹನ ದಾಸರಿಂದ ಪ್ರತಿಷ್ಠಾಪಿಸಲಾದ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಏ.1ರಿಂದ ಗದಗ ಶ್ರೀಪಾದ ಆಚಾರ್ಯ ಅವರಿಂದ ಆರಂಭಗೊಂಡಿದ್ದ ರಾಮಾಯಣ ಪ್ರವಚನ ಸಮಾರೋಪಗೊಂಡಿತು. ಬಳಿಕ ಸದ್ ಗ್ರಂಥಗಳ ಪಾರಾಯಣ, ಭಕ್ತಿ ಗೀತೆಗಳ ಗಾಯನ, ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಂಜೆ ರಾಮದೇವರ ಉತ್ಸವ ಮೂರ್ತಿ ಸಂಕೀರ್ತನೆ ಗ್ರಾಮ ಪ್ರದಕ್ಷಿಣೆಯೂ ನಡೆಯಿತು. ದಿಗ್ಗಾವಿ ಗುರುರಾಜ ಆಚಾರ್ಯ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು.
ಗುರುರಾಜ ಸೇವಾ ಮಂಡಳಿ ಅಧ್ಯಕ್ಷ ಜಿ.ಗೋಪಾಲಕೃಷ್ಣ, ಕಾರ್ಯದರ್ಶಿ ಎ.ನಾಗರಾಜ ಆಚಾರ್, ಖಜಾಂಚಿ ರಮೇಶ ಬಬಲೇಶ್ವರ, ಪ್ರಮುಖರಾದ ಡಿ.ವೇಣುಗೋಪಾಲ ಆಚಾರ್, ಕಾಕುಬಾಳ್ ಶ್ರೀಕಾಂತ ಆಚಾರ್, ಕೆ.ಅನಂತ ಪದ್ಮನಾಭ ಇತರರಿದ್ದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ದೈವಾನುಗ್ರಹ ಜೋತಿಷಿ ಪ್ರಕಾಶ ವೈದ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಭಕ್ತರಿಗೆ ಪಾನಕ, ಕೋಸಂಬ್ರಿ ವಿತರಿಸಲಾಯಿತು. ಕೃಷ್ಣ ವೈದ್ಯ, ಸಣ್ಣ ಗವಿಸಿದ್ದಪ್ಪ, ಎಸ್.ಡಿ. ಬಸವರಾಜ, ಎಚ್.ಎಂ. ವಿಶ್ವನಾಥ ಇತರರಿದ್ದರು.