

ಕಂಪ್ಲಿ: ಪಟ್ಟಣದಲ್ಲಿ ಕನ್ನಡ ಕಟ್ಟೆ ನಿರ್ಮಿಸಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ ಹಾಗೂ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನಗೆ ಕಸಾಪ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ನಾನಾ ದಿನಾಚರಣೆಗೆ ಕನ್ನಡ ಕಟ್ಟೆ ನಿರ್ಮಿಸಬೇಕು. ಈ ಕುರಿತು ಕಳೆದ ಎರಡು ವರ್ಷದಿಂದ ಒತ್ತಾಯಿಸಿದರೂ ಸ್ಪಂದನೆ ಇಲ್ಲ. ನ.1ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅನುಕೂಲವಾಗುವಂತೆ ಕನ್ನಡ ಕಟ್ಟೆ ನಿರ್ಮಿಸುವಂತೆ ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಎಸ್.ಎಂ.ನಾಗರಾಜ, ಸಿ.ಆರ್.ಹನುಮಂತ, ಪ್ರಮುಖರಾದ ಎಸ್.ಎಸ್.ಎಂ.ಚನ್ನಬಸವರಾಜ, ಯು.ವಿರುಪಣ್ಣ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಅಂಬಿಗರ ಮಂಜುನಾಥ, ಬಂಗಿ ದೊಡ್ಡ ಮಂಜುನಾಥ, ಕೋಶಾಧ್ಯಕ್ಷ ಎಸ್.ಡಿ.ಬಸವರಾಜ, ಪದಾಧಿಕಾರಿಗಳಾದ ಎಸ್.ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ಅಶೋಕ ಕುಕನೂರು ಇತರರಿದ್ದರು.