ಕಂಪ್ಲಿಯಲ್ಲಿ ಆಸಾರೆ ಮುಬಾರಕ್ ಪ್ರದರ್ಶನ

14 KAMPLI 02
Published on

ಕಂಪ್ಲಿ: ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಪಟ್ಟಣದ ಇಂದಿರಾನಗರದ ಮಹಮ್ಮದೀಯ ಮಸೀದಿಯಲ್ಲಿ ಶನಿವಾರ ಆಸಾರೆ ಮುಬಾರಕ್ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ಪ್ರಾರ್ಥನೆ ನಂತರ ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಮುಖಂಡ ಆಟೋ ರಾಘವೇಂದ್ರ, ಎಚ್.ಪಿ.ಶ್ರೀಕಾಂತ, ಕರೇಕಲ್ ಮನೋಹರ ಅವರನ್ನು ಗೌರವಿಸಲಾಯಿತು. ಧರ್ಮಗುರುಗಳಾದ ಸೈಯ್ಯದ್ ಷಾಹ್ ಅಬ್ದುಲ್ ಖಾದರ್‌ಖಾದ್ರಿ ಉರುಫ್ ಮುಕ್ತಾರ್ ಸಾಹೇಬ್ ಅಮ್ ಸಜ್ಜಾದೆ ನಶೀನ್ ಕಾನ್‌ಕಾಯ್ ದಿವಾನಖಾನ, ಸೈಯ್ಯದ್ ಷಾಹ್ ಗೇಸುದರಾಜ್‌ಖಾದ್ರಿ ಉರುಫ್ ಸೈಯ್ಯದ್ ಖಮರ್ ಪಾಷ ಸಾಹೇಬ್ ಬಿರಾದಾರೆ ಸಜ್ಜಾದೆ ನಶೀನ್ ದಿವಾನಖಾನ, ಸೈಯ್ಯದ್ ಷಾಹ್ ಉಮೇಶ್‌ಖಾದ್ರಿ ದಿವಾನಾಖಾನ, ಮಹಮ್ಮದೀಯ ಮಸೀದಿ ಅಧ್ಯಕ್ಷ ಎಂ.ಹಸನ್‌ಸಾಬ್, ಪ್ರಮುಖರಾದ ಬಿ.ಶೆಕ್ಷಾವಲಿ, ಚಾಂದ್ ಬಾಷ, ಕೆ.ವಲಿ, ಕೆ.ಮೆಹಬೂಬ್, ಖಾಜಾ, ಅನ್ಸರ್, ಬ್ಯಾಟರಿ ರಾಜಾವಲಿ, ಜಿಲಾನ್‌ಸಾಬ್, ರಫಿಕ್, ಗೌಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net