ಕಂಪ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ

24 KAMPLI 02
Published on

ಕಂಪ್ಲಿ: ಪಟ್ಟಣದಲ್ಲಿ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.

ಪುರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಮಾತನಾಡಿದರು. ಪಕ್ಷಾತೀತವಾಗಿ ಎಲ್ಲ ವಾರ್ಡ್‌ಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಡಿಎಂಎಫ್ ಅನುದಾನ ಒದಗಿಸುವುದಾಗಿ ಸಂಸದ ಹಾಗೂ ಶಾಸಕ ಭರವಸೆ ನೀಡಿದ್ದಾರೆ ಎಂದರು.

ನಮೂನೆ-3 ಶೀಘ್ರ ವಿತರಣೆಗೆ ಡಿಸಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸ್ವಚ್ಛತೆ, ಬೀದಿ ದೀಪ, ಶುದ್ಧ ಕುಡಿವ ನೀರು ಒದಗಿಸುವುದರೊಂದಿಗೆ ಪಟ್ಟಣವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಲಾಗುವುದು. ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಿಎಸ್‌ವಿ ಶಾಲೆ ಸ್ಥಳದಲ್ಲಿ ಪುರಸಭೆಯ ಮಳಿಗೆ ನಿರ್ಮಾಣ, ಹಳೆಯ ಪುರಸಭೆ ಕಟ್ಟಡ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭಟ್ಟ ಪ್ರಸಾದ್ ತಿಳಿಸಿದರು. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮತ್ತು ಶೌಚಗೃಹ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಶಾಸಕ ಜೆ.ಎನ್.ಗಣೇಶ್, ಉಪಾಧ್ಯಕ್ಷೆ ಸುಶೀಲಮ್ಮ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಸದಸ್ಯರಾದ ವೀರಾಂಜನೇಯಲು, ಕೆ.ಎಸ್.ಚಾಂದ್ ಬಾಷ, ಲಡ್ಡು ಹೊನ್ನುರವಲಿ, ಎಂ.ಉಸ್ಮಾನ್, ಮೌಲಾ, ವಿ.ನಾಗಮ್ಮ, ಸುಮಾ ರಾಘವೇಂದ್ರ, ಗುಡುದಮ್ಮ, ಡಿ.ಮೌನೇಶ್, ಕೋಟೇಶ್ವರ, ಗೋಪಾಲಪ್ಪ, ಗದ್ಗಿವಿರೂಪಾಕ್ಷಿ, ಕೆ.ಕೃಷ್ಣ, ಪ್ರಮುಖರಾದ ಬಿ.ನಾರಾಯಣಪ್ಪ, ಬೂದಗುಂಪಿ ಹುಸೇನ್‌ಸಾಬ್, ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net