ಕಂಪ್ಯೂಟರ್ ತರಬೇತಿ ಪಡೆಯಿರಿ

sri comp
ಶೃಂಗೇರಿ ಕನ್ನಡ ಭವನದಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ತಾಪಂ ಇಒ ಸುದೀಪ್ ಉದ್ಘಾಟಿಸಿದರು. ರಮೇಶ್, ಸುದೀಪ್ ಇತರರಿದ್ದರು.
Published on

ಶೃಂಗೇರಿ: ಆಧುನಿಕ ಯುಗದಲ್ಲಿ ಎಲ್ಲರಿಗೂ ಕಂಪ್ಯೂಟರ್ ತರಬೇತಿ ಅಗತ್ಯವಿದ್ದು, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂದು ತಾಪಂ ಇಒ ಸುದೀಪ್ ಹೇಳಿದರು.

ಕನ್ನಡ ಭವನದಲ್ಲಿ ಶ್ರೀ ಶಾರದಾ ಗ್ರಾಮ ಅಭಿವೃದ್ಧಿ ಸಂಸ್ಥೆಯಿಂದ ಏರ್ಪಡಿಸಿದ್ದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಕ್ಷೇತ್ರದಲ್ಲಿ ಎಲ್ಲ ವ್ಯವಹಾರವೂ ಕಂಪ್ಯೂಟರ್ ಮೂಲಕವೇ ಆಗುತ್ತಿದೆ. ಶಿಕ್ಷಣ ಕ್ಷೇತ್ರದ ಮತ್ತೊಂದು ಭಾಗ ಕಂಪ್ಯೂಟರ್ ಆಗಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ, ಈಗ ಕಲಿಕೆಗೆ ಉತ್ತಮ ಅವಕಾಶವಿದ್ದು, ವಿದ್ಯಾರ್ಥಿಗಳು ಸಮಯ ಸದುಪಯೋಗಪಡಿಸಿಕೊಳ್ಳಬೇಕು. ರೈತರು ಸಹ ಕಂಪ್ಯೂಟರ್ ಬಳಕೆ ಮೂಲಕ ಆಧುನಿಕ ಯುಗಕ್ಕೆ ಹೊಂದಿಕೊಂಡಿದ್ದಾರೆ. ನಿರಂತರವಾಗಿ ಬಳಕೆ ಮಾಡುವುದರಿಂದ ಅದರಲ್ಲಿ ಯಶಸ್ಸು ದೊರಕುತ್ತದೆ ಎಂದರು. ಶ್ರೀ ಶಾರದಾ ಗ್ರಾಮ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಆನಂದಸ್ವಾಮಿ, ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ಶೂನ್ಯ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net